ದೇಶದಲ್ಲಿ ಆರು ಜನರಿಗೆ HMPV ವೈರಸ್: ಮತ್ತೆ ಮಾಸ್ಕ್ ಸೇರಿ ಮಾರ್ಗಸೂಚಿ ವಿವರ ಇಲ್ಲಿದೆ

ನವದೆಹಲಿ: ದೇಶದಲ್ಲಿ ಚೀನಾದ ಮತ್ತೊಂದು ವೈರಸ್ (HMPV) ಕಾಟ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಎರಡು, ಗುಜರಾತ್, ಪ.ಬಂಗಾಳದಲ್ಲಿ ತಲಾ 1, ತಮಿಳುನಾಡಿನಲ್ಲಿ 2 ಪ್ರಕರಣ ಸೇರಿದಂತೆ ದೇಶದಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕಿರುವುದು ಪತ್ತೆಯಾಗುತ್ತಿ ದ್ದಂತೆ ಸೋಮವಾರ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಯಾವ ರೀತಿಯಲ್ಲಿ ಕ್ರಮ ವಹಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದೆ.

ಇದರೊಂದಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಆರೋಗ್ಯ ಇಲಾಖೆ, ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಸಲಹೆ ನೀಡಿದೆ. ಮಾಸ್ಕ್ ಧಾರಣೆ ಸದ್ಯಕ್ಕೆ ಕಡ್ಡಾಯಗೊಳಿಸದಿದ್ದರೂ, ಮುಂದಿನ ದಿನಗಳಲ್ಲಿ ವಿಕೋಪಕ್ಕೆ ಹೋದರೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೊಸ ವೈರಸ್ ಅಲ್ಲ, ಆತಂಕ ಬೇಡ: ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಹೂಮನ್ ಮೆಟಾನ್ಯುಮೊ ವೈರಸ್ (ಎಚ್ ಎಂಪಿವಿ) ಇಬ್ಬರು ಮಕ್ಕಳಲ್ಲಿ ಪತ್ತೆಯಾ ಗಿದೆ. ಆದರೆ ಇದು ಹೊಸ ವೈರಸ್ ಅಲ್ಲ. ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್‌ಎಂಪಿವಿ ಕುರಿತಾಗಿ ಸದ್ಯ ಕೇಂದ್ರದಿಂದಲೂ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಆದರೆ ರಾಜ್ಯ ಸರಕಾರ ಈ ವಿಚಾರವಾಗಿ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು, ಐಸಿ ಎಂಆರ್ ಸೂಚನೆಗಳನ್ನು ಅನುಸರಿಸಲಾಗುವುದು.

ಇದು ದೇಶದಲ್ಲಿ ಪ್ರಥಮ ಪ್ರಕರಣ ಎಂದು ಹೇಳುವುದು ಸರಿಯಲ್ಲ. 2001ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಮೊದಲಿಗೆ ಪತ್ತೆಯಾದ ಎಚ್‌ಎಂಪಿ ವೈರಸ್ ಭಾರತ ಸೇರಿ ಎಲ್ಲೆಡೆ ಇದೆ. ಇದರಿಂದ ಯಾವುದೇ ಅಪಾಯ ಇಲ್ಲ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ.

ಇದು ಮಾರಣಾಂತಿಕ ವೈರಸ್ ಅಲ್ಲ. ಹಾಗಾಗಿ ವೈರಾಣು ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಸೇರಿ ಶೀತ ಸಂಬಂಧಿ ಸಮಸ್ಯೆ ಇರುವವರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯವಾಗಿ ಐಎಲ್‌ಐ ಪ್ರಕರಣಗಳಲ್ಲಿ ಶೇ.1ರಷ್ಟು ಎಚ್ ಎಂಪಿವಿ ಕಂಡು ಬರುತ್ತದೆ. ಇಂಥಹುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಎಂಪಿ ವೈರಾಣು ಪತ್ತೆಯಾಗಿದೆ. ಇಬ್ಬರು ಮಕ್ಕಳಲ್ಲಿ ಮೂರು ತಿಂಗಳ ಮಗು ಸಂಪೂರ್ಣ ಗುಣಮುಖವಾಗಿ ಡಿಸೆಂಬರ್‌ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.

ಎಂಟು ತಿಂಗಳ ಮಗು ಬಹುತೇಕ ಗುಣ ಹೊಂದಿದ್ದು, ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಲಿದೆ. ಹಾಗಾಗಿ ಹೆಚ್ಚಿನ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.

ಮಾರ್ಗಸೂಚಿಯಲ್ಲಿ ವಿವರ

ಏನು ಮಾಡಬೇಕು?

  • ಮಾಸ್ಕ್ ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಮ್ಯೂ ಪೇಪರ್ ಬಳಕೆ ಮಾಡಿ
  • ಪದೇ ಪದೆ ಕೈಯನ್ನು ಸೋಪ್‌ನಿಂದ ಅಥವಾ ಆಲ್ನೋಹಾಲ್ ಸ್ಯಾನಿಟೈಸರ್‌ನಿಂದ ತೊಳೆಯಿರಿ
  • ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದರೆ ಜನನಿಬಿಡ ಪ್ರದೇಶದಿಂದ ದೂರವಿರಿ
  • ನಿಮಗೆ ಹುಷಾರಿಲ್ಲದಿದ್ದರೆ ಮನೆಯಲ್ಲಿ ಇರಿ ಮತ್ತು ಇತರರೊಂದಿಗೆ ಸೀಮಿತ ಸಂಪರ್ಕ ಸಾಧಿಸಿ
  • ಸಾಧ್ಯವಾದಷ್ಟು ನೀರು ಮತ್ತು ಪೋಷಕಾಂಶಯುಕ್ತ ಆಹಾರ ಸೇವಿಸಿ

ಇದನ್ನು ಮಾಡಬೇಡಿ

  • ಒಮ್ಮೆ ಬಳಸಿದ ಕರವಸ್ತ್ರ ಮತ್ತು ಟಿಮ್ಯೂ ಮರುಬಳಕೆ ಬೇಡ
  • ಅನಾರೋಗ್ಯಕ್ಕೆ ಒಳಗಾದ ನಿಮ್ಮ ಹತ್ತಿರದವರ ಟವೆಲ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಬೇಡ
  • ಪದೇ ಪದೆ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ
  • ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ
  • ವೈದ್ಯರ ಸಂಪರ್ಕಕ್ಕೆ ಒಳಗಾಗದೇ ಸ್ವಯಂ ಚಿಕಿತ್ಸೆ ಬೇಡ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

Doddaballapura: ದೊಡ್ಡಬಳ್ಳಾಪುರಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ

Doddaballapura: ದೊಡ್ಡಬಳ್ಳಾಪುರಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ

ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಗಳಿಂದ, ನಾಡಿನ ಜನತೆ ನೆಮ್ಮದಿಯಿಂದ ಊಟ ಮಾಡುವಂತಾಗಿದೆ. Doddaballapura

[ccc_my_favorite_select_button post_id="100532"]
K.J.George: ಲೋಡ್ ಶೆಡಿಂಗ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ: ಸಚಿವ ಕೆ.ಜೆ.ಜಾರ್ಜ್

K.J.George: ಲೋಡ್ ಶೆಡಿಂಗ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ: ಸಚಿವ ಕೆ.ಜೆ.ಜಾರ್ಜ್

ಹೊಸಕೋಟೆ ತಾಲೂಕಿನಲ್ಲಿ ಕುಸುಮ್-ಸಿ ಯೋಜನೆಯಡಿ ಕೆರೆಗಳ ಅಂಗಳಗಳಲ್ಲಿ ನಡೆಯುತ್ತಿರುವ ಫೀಡರ್ ಸೌರೀಕರಣ ಕಾಮಗಾರಿ K.J.George

[ccc_my_favorite_select_button post_id="100557"]
Tirupati| ತಿರುಪತಿಯಲ್ಲಿ ಘನ ಘೋರ ದುರಂತ; ಕರ್ನಾಟಕ ಮೂಲದ ಮಹಿಳೆ ಸಾವು..! Video

Tirupati| ತಿರುಪತಿಯಲ್ಲಿ ಘನ ಘೋರ ದುರಂತ; ಕರ್ನಾಟಕ ಮೂಲದ ಮಹಿಳೆ ಸಾವು..! Video

ಏಕಾಏಕಿ ಸಾವಿರಾರು ಮಂದಿ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ tirupati

[ccc_my_favorite_select_button post_id="100515"]
California; ಭೀಕರ ಕಾಡ್ಗಿಚ್ಚು: ಮನೆ, ವಾಹನ ಭಸ್ಮ..!| Video ನೋಡಿ

California; ಭೀಕರ ಕಾಡ್ಗಿಚ್ಚು: ಮನೆ, ವಾಹನ ಭಸ್ಮ..!| Video ನೋಡಿ

Pacific Palisade fire made Southern California look like an absolute Horror movie. Everyone is FORCED to evacuate, They are out of Water, Fighter Fighters, The wind is so strong that Tunker

[ccc_my_favorite_select_button post_id="100450"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
Murder: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

Murder: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ಗಂಗರಾಜುವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. Murder

[ccc_my_favorite_select_button post_id="100474"]
Accident: ಮಗನ ನಿರ್ಲಕ್ಷ್ಯಕ್ಕೆ ಆತನ ತಾಯಿ ಬಲಿ…!| Video

Accident: ಮಗನ ನಿರ್ಲಕ್ಷ್ಯಕ್ಕೆ ಆತನ ತಾಯಿ ಬಲಿ…!| Video

ಸ್ಕೂಟರ್ ಚಲಾಯಿಸುತ್ತಿದ್ದ ಮಗನ ನಿರ್ಲಕ್ಷ್ಯಕ್ಕೆ ಆತನ ತಾಯಿ ಬಲಿಯಾಗಿರುವ ಘಟನೆ (Accident)

[ccc_my_favorite_select_button post_id="100545"]

ಆರೋಗ್ಯ

ಸಿನಿಮಾ

Doctorate: ಖ್ಯಾತ ನಟಿ ತಾರಾ ಸೇರಿ 3 ಮಂದಿಗೆ ಡಾಕ್ಟರೇಟ್ ಗೌರವ..!

Doctorate: ಖ್ಯಾತ ನಟಿ ತಾರಾ ಸೇರಿ 3 ಮಂದಿಗೆ ಡಾಕ್ಟರೇಟ್ ಗೌರವ..!

ಸಿನಿಮಾ ಕ್ಷೇತ್ರದ ಸಾಧನೆಗಾಗಿ ತಾರಾ ಅವರಿಗೆ ವಿವಿಯ ಕುಲಾಧಿಪತಿ Doctorate

[ccc_my_favorite_select_button post_id="100512"]
error: Content is protected !!