ಕೋಲಾರ: ಮದುವೆಯಾಗಿ ಪತ್ನಿ ಇದ್ದರೂ ಮತ್ತೊಬ್ಬಳನ್ನು ವಿವಾಹವಾಗಲು ಮುಂದಾಗಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಮನಬಂದಂತೆ ಥಳಿಸಿ ಕೊಲೆ (Murder) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು 28 ವರ್ಷದ ಉಸ್ಮಾನ್ ಎಂದು ಗುರುತಿಸಲಾಗಿದೆ.
ಉಸ್ಮಾನ್ ಐದು ವರ್ಷ ಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಇತ್ತೀಚೆಗೆ ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್ ಸಲುಗೆ ಬೆಳೆಸಿದ್ದ. ಈ ವಿಷಯ ತಿಳಿದು ಜಬೀನ್ ಆಕ್ರೋಶಗೊಂಡು
ಜಗಳವಾಡಿದ್ದರು ನಂತರ ಪತಿ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿ, ತವರು ಮನೆ ಸೇರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತಿ ಉಸ್ಮಾನ್ ತನ್ನ ಪ್ರೇಯಸಿಯ ಮನೆಗೆ ತೆರಳಿ, ಕುಟುಂಬ ಸದಸ್ಯರ ಬಳಿ ಆಕೆಯನ್ನು ಮದುವೆ ಮಾಡಿಕೊಡುವಂತೆ ಏರುದನಿಯಲ್ಲಿ ಕೇಳಿದ್ದ ನಂತರ ಅಲ್ಲಿಂದ ಹೊರಟಾಗ ಆತನನ್ನು ಹಿಂಬಾಲಿಸಿ ನೂರ್‌ನಗರ ಬಳಿ ಹುಡುಗಿಯ ಮನೆಯವರು ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದಾರೆ.
ಆತ ಕುಸಿದು ಬಿದ್ದರೂ ಬಿಡದೆ ಸ್ಥಳೀಯರ ಜೊತೆಗೂಡಿ ತಿಳಿದು ರಸ್ತೆ ಬದಿ ಎಸೆದಿದ್ದಾರೆ, ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ದಾವಿಸಿ ತೀವ್ರವಾಗಿ ಗಾಯಗೊಂಡಿದ್ದ ಉಸ್ಮಾನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಕೋಲಾರ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.