ದೊಡ್ಡಬಳ್ಳಾಪುರ (harithalekhani): ಜಾತ್ರೆ ನೋಡಲು ಬಂದಿದ್ದ ವೃದ್ಧೆಯ ಮಾಂಗಲ್ಯ ಸರವನ್ನು ಖದೀಮರು ಕಿತ್ತೊಯ್ದಿರುವ ಘಟನೆ ತಾಲೂಕಿನ ಮಲ್ಲೋಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ನಡೆದಿದೆ.
ಏ.13ರಂದು ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿಯ 87ನೇ ಬ್ರಹ್ಮರಥೋತ್ಸವ ಸಂಭ್ರಮದಿಂದ ನೆರವೇರಿಸಲಾಗಿದೆ.
ಇಸ್ತೂರು ಗ್ರಾಮದ ರಂಗಮ್ಮ ಅವರು ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಮಲ್ಲೋಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವಕ್ಕೆ ಹೋಗಿದ್ದರು.
ಬ್ರಹ್ಮರಥೋತ್ಸವದಲ್ಲಿ ರಥ ಎಳೆಯುವ ಸಂದರ್ಭದಲ್ಲಿ ಉಂಟಾದ ಜನಜಂಗುಳಿಯಲ್ಲಿ ಕಳ್ಳರು 71 ವರ್ಷದ ವಯಸ್ಸಿನ ರಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ಮೌಲ್ಯದ ಒಟ್ಟು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ