ಬೆಂಗಳೂರು (harithalekhani): ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು (Secretary), ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಮಾಡುವ ಸಂಬಂಧ ಕೌನ್ಸೆಲಿಂಗ್ ಪ್ರಕ್ರಿಯೆ ಏ. 17805 ಮೇ 13ರವರೆಗೆ ನಡೆಯಲಿದೆ.
ಈ ಕುರಿತಂತೆ ಪಂಚಾಯತ್‌ರಾಜ್ ಆಯುಕ್ತಾಲಯ ಅಧಿಸೂಚನೆ ಹೊರಡಿಸಿದ್ದು, ಒಟ್ಟಾರೆ ಶೇ.15ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಪೈಕಿ ಕಡ್ಡಾಯ ಹಾಗೂ ಸಾಮಾನ್ಯ ವರ್ಗಾವಣೆ ಶೇ. 9, ಒಂಟಿ ಮಹಿಳೆ,ಪತಿ, ಪತ್ನಿ ಪ್ರಕರಣ ಶೇ. 3, ಏಕ ಪೋಷಕರು, ಹಾಗೂ 12 ವರ್ಷ ಒಳಗೆ ಇರುವ ಮಕ್ಕಳು ಅಥವಾ ಪತಿ ಅಥವಾ ಪತ್ನಿ ಅಂಗವಿಕಲರಾಗಿದ್ದಲ್ಲಿ, ಇಲ್ಲವೇ ಮಕ್ಕಳು ಗಂಭೀರವಾದ ಅಂಗವಿಕಲತೆಯಿಂದ ಬಳಲುತ್ತಿದ್ದರೆ ಅಂತಹ ನೌಕರರಿಗೆ ಶೇ.1 ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಹಾಗೂ ಗಂಭೀರವಾದ ಅಂಗವಿಕಲತೆ ಇರುವ ಪ್ರಕರಣಗಳಿಗೆ ತಲಾ 1ರಷ್ಟು ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ವರ್ಗಾವಣೆ ಬಯಸುವವರ ಆನ್ ಲೈನ್ ಮೂಲಕ ಏ. 17ರಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.