ಚಿತ್ರದುರ್ಗ (Harithalekhani); ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಹೊಳಲ್ಕೆರೆಯ ರಾಮಘಟ್ಟ ಗ್ರಾಮದ ಆಶಾ (25 ವರ್ಷ) ಎಂದು ಗುರುತಿಸಲಾಗಿದೆ.
ಆಶಾ ಅವರು ಖಾಸಗಿ ಶಾಲೆಯೊಂದರ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಈಕೆಯಿಂದ ಅನಿಲಾಸನ್ ಎಂಬಾತ 50 ಸಾವಿರ ರೂ. ಸಾಲ ಪಡೆದಿದ್ದ ಆದರೆ ಸಾಲದ ಹಣ ಮರಳಿಸಿದೇ ಸತಾಯಿಸುತ್ತಿದ್ದ ಹಲವರ ಸಮ್ಮುಖದಲ್ಲಿ ಈ ಜಗಳ ಇತ್ಯರ್ಥಗೊಂಡು ಅನಿಲಾಸನ್ ಹಣ ಮರಳಿಸಬೇಕೆಂದು ತಾಕೀತು ಮಾಡಲಾಗಿತ್ತಂತೆ.
ಎರಡು ದಿನದ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶದ ಬಳಿ ಬರಲು ಹೇಳಿದ್ದ. ಅಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಜಾತ್ರೆ ನೋಡಲು ಬಂದ ವೃದ್ಧೆಯ ಮಾಂಗಲ್ಯ ಸರ ಕಿತ್ತೊಯ್ದ ಕಳ್ಳರು..