harithalekhani ದೊಡ್ಡಬಳ್ಳಾಪುರ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ (Malashri) ಅವರು ಮಕ್ಕಳೊಂದಿಗೆ ಇಂದು ತಾಲೂಕಿನ ಪ್ರಸಿದ್ಧ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಮಗ ಆರ್ಯನ್ (Arayan) ಪುತ್ರಿ ನಟಿ ಆರಾಧನ ರಾಮ್ (Aradhana Ram) ಅವರೊಂದಿಗೆ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದ ಅವರಿಗೆ ದೇವಾಲಯದ ಆಡಳಿತ ಮಂಡಳಿ ವಿಶೇಷ ಪೂಜೆಗೆ ಅವಕಾಶ ಕಲ್ಪಿಸಿದರು.
ಸುಮಾರು 5ಕ್ಕೂ ಹೆಚ್ಚು ನಿಮಿಷಗಳ ಕಾಲ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಅವರು, ಬಳಿಕ ತೆರಳಿದರು.
Malashri ಇದನ್ನೂ ಓದಿ: Doddaballapura: ನೀರಿನ ತೊಟ್ಟಿಗೆ ಬಿದ್ದ ಹಾವನ್ನು ರಕ್ಷಿಸಿದ ಸ್ನೇಕ್ ಉಲ್ಲಾಸ್..!| Video ನೋಡಿ
ಸ್ಯಾಂಡಲ್ವುಡ್ನ ‘ಕನಸಿನ ಕನ್ಯೆ’, ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎನ್ನಿಸಿಕೊಂಡವರು ನಟಿ ಮಾಲಾಶ್ರೀ. ಯಾವ ಸೂಪರ್ ಸ್ಟಾರ್ಗಳಿಗೂ ಕಡಿಮೆ ಇಲ್ಲದಂತೆ ಪ್ರೇಕ್ಷಕರ ಮನಗೆದ್ದ ಮಾಲಾಶ್ರೀ ಅವರು, ಮಾಲಾಶ್ರೀ, ಮಹಿಳಾ ಪ್ರಧಾನ ಸಿನಿಮಾಗಳಿಂದ ಆರಂಭಿಸಿ ಕಣ್ಣೀರಕೋಡಿ ಹರಿಸುವ ಪಾತ್ರಗಳವರೆಗೆ ಎಲ್ಲ ಸಿನಿಮಾಗಳಲ್ಲಿ ಮಿಂಚಿ ಮೆರೆದವರು.
ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಿಂದ ಬ್ರೇಕ್ ಪಡೆದ ಮಾಲಾಶ್ರೀ, ಸದ್ಯ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತರೋ ಪ್ರಯತ್ನದಲ್ಲಿದ್ದಾರೆ.
ಇತ್ತೀಚಿಗಷ್ಟೇ ಪುತ್ರಿ ಆರಾಧನಾ ರಾಮ್ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಾಟೀರ ಸಿನಿಮಾದಲ್ಲಿ ನಾಯಕಿಯಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟು, ಭರ್ಜರಿ ಯಶಸ್ಸು ಪಡೆದಿದ್ದಾರೆ.
ಇದರ ಬಳಿಕ ಇದೀಗ ಪುತ್ರ ಆರ್ಯನ್ ಕನ್ನಡ ಚಿತ್ರರಂಗಕ್ಕೆ ಬರೋದಕ್ಕೆ ರೆಡಿಯಾಗ್ತಿದ್ದಾನಾ? ಹೀಗೊಂದು ಮಾತು ಕೇಳಿ ಬರ್ತಿದೆ.