ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಮಡದಿಯೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ಬೆಂಗಳೂರಿನ ಪ್ರಸಿದ್ಧ ಆದಿಶಕ್ತಿ ದ್ರೌಪದಿಯಮ್ಮನವರ ಐತಿಹಾಸಿಕ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವದಲ್ಲಿ ಪಾಲ್ಗೋಂಡ ಬಳಿಕ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದರು.

ಸಚಿವ ಕೆಹೆಚ್.ಮುನಿಯಪ್ಪ, ಕೆಪಿಸಿಸಿ ಉಪಾಧ್ಯಕ್ಷ ಟಿ ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಉಪ ನಗರ ವರ್ತುಲ ಯೋಜನೆ ಪ್ರಾಧಿಕಾರದ ಸದಸ್ಯ (STRR) ನ್ಯಾಯವಾದಿ ದೀಪು ಮತ್ತಿತರರು ಡಿಸಿಎಂಗೆ ಸಾಥ್ ನೀಡಿದರು.
ಬೆಂಗಳೂರಿನಿಂದ ಬಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಂಟನಕುಂಟೆ ಬಳಿ ಹಿರಿಯ ಮುಖಂಡ ಕಂಟನಕುಂಟೆ ಕೃಷ್ಣಮೂರ್ತಿ , ರಾಜಗೋಪಲ್ ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಶರತ್ ಪಟೇಲ್ , ಪ್ರಧಾನ ಕಾರ್ಯದರ್ಶಿ ಸುಶಾಂತ್ ಕೆ ,ಯಶವಂತ್ ಆರಾಧ್ಯ ,ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್ ಗ್ರಾಮಾಂತರ ಬ್ಲಾಕ್ ಯುವ ಅಧ್ಯಕ್ಷ ರಾಕೇಶ್ ಗೌಡ ನೇರಳಘಟ್ಟ, ರಂಜನ್ ಕಂಟನಕುಂಟೆ ಮುಂತಾದ ಪದಾಧಿಕಾರಿಗಳು, ಶಾಲು ಹೊದಿಸಿ, ಮಾಲಾರ್ಪಣೆ ಮಾಡುವ ಮೂಲಕ ದೊಡ್ಡಬಳ್ಳಾಪುರ ತಾಲೂಕಿಗೆ ಸ್ವಾಗತ ಕೋರಿದರು.

ಬಳಿಕ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿಸಿಎಂ ದಂಪತಿಗಳಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ ದೇವಾಲಯದ ಆಡಳಿತ ಮಂಡಳಿ ವಿಶೇಷ ಪೂಜೆಗೆ ಅವಕಾಶ ಕಲ್ಪಿಸಿದರು.