ದೊಡ್ಡಬಳ್ಳಾಪುರ (Doddaballapura): ಎಲೆಕ್ಟ್ರಿಕ್ ಸ್ಕೂಟರ್ ಒಂದು ಏಕಾಏಕಿ ಬೆಂಕಿ ಹೊತ್ತಿ ಉರಿದಿರುವ ಘಟನೆ ನಗರದ ವಾಸವಿ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಬಣ್ಣದ ವ್ಯಾಪಾರ ಮಾಡುವ ಚಂದ್ರಶೇಖರ್ ಎನ್ನುವವರು ಪ್ರತಿ ನಿತ್ಯದಂತೆ ಇಂದು ಅಂಗಡಿ ಬಂದು ಹೊರಗೆ ಗಾಡಿ ನಿಲ್ಲಿಸಿದ್ದಾಗ ಏಕಾಏಕಿ ಬೆಂಕಿ ಹೊತ್ತಿ ಕೊಂಡಿದೆ.
ಇದನ್ನು ಕಂಡ ಸ್ಥಳೀಯರು ಬೆಂಕಿ ಹೊತ್ತಿಕೊಂಡ ವಾಹನವನ್ನು ಅಂಗಡಿ ಮುಂದಿನಿಂದ ರಸ್ತೆಗೆ ಎಳೆದು ನಿಲ್ಲಿಸಿ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಿದ್ದಾರೆ.
ಚಂದ್ರಶೇಖರ್ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಜಪಾನ್ ಮೂಲದ ಎಲೆಕ್ಟ್ರಿಕ್ ಗಾಡಿ ಖರೀದಿ ಮಾಡಿದ್ದು, ಇತ್ತೀಚೆಗಷ್ಟೆ ನೂತನ ಬ್ಯಾಟರಿ ಅಳವಡಿಸಿದ್ದರು ಎಂದು ತಿಳಿದುಬಂದಿದೆ.
ಇಂದು ಅಂಗಡಿ ಮುಂದೆ ಏಕಾಏಕಿ ಬೆಂಕಿಹೊತ್ತೊಕೊಂಡು ಸ್ಕೂಟರ್ ಸಂಪೂರ್ಣ ಭಸ್ಮವಾಗಿದೆ.
ಇನ್ನೂ ಸ್ಕೂಟರ್ಗೆ ಹೊತ್ತಿದೆ ಬೆಂಕಿಯ ಜ್ವಾಲೆ ವ್ಯಾಪಕವಾಗಿ, ದಟ್ಟ ಹೊಗೆ ಈ ವ್ಯಾಪ್ತಿಯಲ್ಲಿ ಹರಡಿತ್ತು.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.