ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರಾಜ್ಯ ಬಿಜೆಪಿ (BJP) ಇದೀಗ ಸರಣಿ ಹೋರಾಟಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಸೋಮವಾರ ಮೈಸೂರಿನಲ್ಲಿ ‘ಜನಾಕ್ರೋಶ ಯಾತ್ರೆ’ಗೆ ಚಾಲನೆ ನೀಡಲಿದೆ.
ಮತ್ತೊಂದೆಡೆ ಎಲ್ಲಿಯವರೆಗೆ ಒಂದು ಕುಟುಂಬದಿಂದ ಬಿಜೆಪಿ ಮುಕ್ತ ಆಗುವುದಿಲ್ಲವೋ ಅಲ್ಲಿಯವರೆಗೆ ನಾನು ಪಕ್ಷ ಸೇರ್ಪಡೆ ಆಗುವುದಿಲ್ಲ ಎಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿರುವ ಅವರು, ಯಡಿಯರಪ್ಪ ಕುಟುಂಬದಿಂದ ಮುಕ್ತವಾದ ಮೇಲೆ ನಾನು ಬಿಜೆಪಿಗೆ ಹೋಗುತ್ತೇನೆ. ಒಂದು ದಿನ ಎಲ್ಲರೂ ಹೋಗಲೇಬೇಕು. ಯಾವುದು ಶಾಶ್ವತವಲ್ಲ.
ನಾನು ಒಳ್ಳೆಯವನು, ದುಷ್ಟರಿಗೆ ನಾನು ದುಷ್ಟ.. ಬಿ.ವೈ.ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಆರಿಸಿ ಬಂದವ. ಆತನಿಗೆ ದಮ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರಿಸಿ ಬರಲಿ. ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ದ ಎಂದು ಸವಾಲೆಸೆದರು.
ಕೇವಲ ಭಗವಾಧ್ವಜ ಮೇಲೆ ಆಯ್ಕೆಯಾಗುತ್ತೇನೆ. ನನಗೆ ಮುಸ್ಲಿಮರ ಮತ ಬೇಡ. ವಿಜಯೇಂದ್ರ
ಗೆ ರಾಜೀನಾಮೆ ಕೊಟ್ಟು ಆರಿಸಿ ಬರುವ ತಾಕತ್ ಇದೆಯಾ ಎಂದು ಸವಾಲು ಹಾಕಿದರು. ನಾನೇನೂ ಬಿಜೆಪಿ ಬಿಟ್ಟಿಲ್ಲ. ತಂದೆ ಮಕ್ಕಳು ಸೇರಿ ನನ್ನನ್ನು ಹೊರ ಹಾಕಿದ್ದಾರೆ ಎಂದು ದೂರಿದರು.