ದೊಡ್ಡಬಳ್ಳಾಪುರ (Doddaballapura): ತಾಲೂಕಿನ ರಾಜಘಟ್ಟದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮಾಂಜನೇಯಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು.
ದೇವಾಲಯದಲ್ಲಿ ಆಂಜನೇಯಸ್ವಾಮಿ ಹಾಗೂ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಮೂರ್ತಿಗೆ ಅಭಿಷೇಕ, ಕಲ್ಯಾಣೋತ್ಸವ, ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್‍ಯಗಳು ನಡೆದವು.
ರಾಜಘಟ್ಟ, ತೊಗರಿಘಟ್ಟ ಗ್ರಾಮಸ್ಥರಿಂದ ಹೂವಿನ ಅಲಂಕಾರ, ರಥೋತ್ಸವಗಳ ಸೇವೆ ನಡೆಯಿತು.
ಜಾತ್ರೆಯ ಅಂಗವಾಗಿ ವಿವಿಧ ಬಗೆಯ ಅಂಗಡಿ ಮುಗ್ಗಟ್ಟುಗಳು ನೆರೆದಿದ್ದವು. ವಿವಿಧ ಸಮಿತಿಗಳಿಂದ ಅರವಂಟಿಗೆ ಸೇವಾ ಕಾರ್‍ಯ, ಅನ್ನ ಸಂತರ್ಪಣೆ ಕಾರ್‍ಯಕ್ರಮ ನಡೆಯಿತು, ಆಂಜನೇಯಸ್ವಾಮಿಗೆ ರಾಜಘಟ್ಟ ಗ್ರಾಮಸ್ಥರಿಂದ ಹೂವಿನ ಆರತಿಗಳ ಸೇವೆ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಏ.8ರಂದು ಕ್ಷೀರಾಭಿಷೇಕ, ಊರಿನ ಗ್ರಾಮ ದೇವರುಗಳಿಗೆ ಆರತಿಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ.