ದೊಡ್ಡಬಳ್ಳಾಪುರ (Doddaballapura): ದೇವಾಲಯದ ಮುಂಭಾಗ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ದೊಡ್ಡಬೆಳವಂಗಲ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್ ಕರಾತ ಅವರ ಸೂಚನೆಯ ಮೇರೆ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮೀ ನೇತೃತ್ವದಲ್ಲಿ ಕೆಂಚಿಗದಹಳ್ಳಿ ದೇವಾಲಯದ ಮುಂದೆ ಇಸ್ಪೀಟ್ ಆಡುವ ವೇಳೆ ದಾಳಿ ನಡೆಸಲಾಗಿದೆ.
ಈ ವೇಳೆ ಸುಮಾರು 3500 ರೂ ನಗದನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯ ವೇಳೆ ಇನ್ಸ್ಪೆಕ್ಟರ್ ವರಲಕ್ಷ್ಮೀ, ಸಿಬ್ಬಂದಿಗಳಾದ ಜಗದೀಶ್, ರಮೇಶ್, ಶರತ್, ಶ್ರೀಧರ್, ಸಂತೋಷ್ ಇದ್ದರು ಎಂದು ತಿಳಿದು ಬಂದಿದೆ.