Astrology: ಶನಿವಾರ, ಏಪ್ರಿಲ್ 05, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಅತಿಯಾದ ಹಠ ಒಳ್ಳೆಯದಲ್ಲ. ಒತ್ತಡಗಳಿಗೆ ಮಣಿಯುವ ಸನ್ನಿವೇಶಗಳು ಎದುರಾಗಬಹುದು. ಕುಟುಂಬದ ಸಮಸ್ಯೆಗಳು ಉಲ್ಭಣಗೊಳ್ಳ ಬಹುದು. ಪರಿಸ್ಥಿತಿ ಎದುರಿಸಲು ಸಿದ್ಧರಾಗಿ. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಹಣದ ಕೊರತೆಯು ಇಂದು ಕುಟುಂಬ ದಲ್ಲಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡುವ ಮೊದಲು ಚೆನ್ನಾಗಿ ಯೋಚಿಸಿ ಮತ್ತು ಅವರಿಂದ ಸಲಹೆ ಪಡೆಯಿರಿ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ಈ ದಿನ ನಿಮ್ಮ ಜೀವನವನ್ನು ಹೆಚ್ಚು ಉತ್ಕೃಷ್ಟಗೊಳಿಸಿ. ಚಿಂತೆಯನ್ನು ಮಾಡಬೇಡಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. ಅನಾರೋಗ್ಯ ಕಾಣಿಸಿಕೊಳ್ಳಬಹುದು. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗರುವಾಗುತ್ತದೆ. ಸಲಹೆಗಳನ್ನು ಸ್ವೀಕರಿಸಿ. ಇದು ಬಿಕ್ಕಟ್ಟಿನಿಂದ ಹೊರಬರಲು ನಿಮಗೆ ಸಹಾಯ ವಾಗುತ್ತದೆ. (ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ಶೀಘ್ರದಲ್ಲಿ ಅನಿ ರೀಕ್ಷಿತ ಶುಭ ಸಮಾಚಾರಗಳು ಕೇಳಿ ಬರಲಿವೆ. ಸಮಸ್ಯೆಗಳೂ ದೂರಾಗಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಿದು. ಆದರೆ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ, ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ. (ಭಕ್ತಿಯಿಂದ ಶ್ರೀ ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ಮನಸ್ಸಿ ಗೊಂದಲ ಗಳಿಂದ ಒತ್ತಡ ಎದುರಾಗಬ ಹುದು.ದೇಹ ವಿಶ್ರಾಂತಿ ಬಯಸಬಹುದು. ಆರೋಗ್ಯ ಕಡೆ ಹೆಚ್ಚಿನ ಗಮನ ಕೊಡಿ. ಇತರರ ಬಗ್ಗೆ ಅತಿಯಾದ ಆಲೋಚನೆಗಳು ಒಳ್ಳೆಯದಲ್ಲ. (ಭಕ್ತಿಯಿಂದ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಪತ್ನಿ, ಕುಟುಂಬ ಸ್ಥರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೊಸ ಕೆಲಸ, ಯೋಜನೆಗಳನ್ನು ಮುಂದೂಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಹಣಕಾಸಿನ ವಿಷಯದಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಸಾಧ್ಯವಾದಷ್ಟು ಹೆಚ್ಚಿನ ಗಮನವನ್ನು ನೀಡಿ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ. (ಭಕ್ತಿಯಿಂದ ಶ್ರೀ ಶಕ್ತಿಗಣಪತಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆದರೆ ಮೊದಲು ಚರ್ಚೆಗಳು ನಡೆಯಬೇಕು. ನೀವು ಇತರರನ್ನು ಸಂಪರ್ಕಿಸದೆ ಮುಂದಕ್ಕೆ ಧಾವಿಸುತ್ತೀರಿ. ಇದರಿಂದ ಮನಸ್ತಾಪಗಳು
ಎದುರಾಗಬಹುದು. ಎಚ್ಚರವಿರಲಿ. (ಭಕ್ತಿಯಿಂದ ನವಗ್ರಹದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)
ಮಕರ ರಾಶಿ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ವಿಚಲಿತರಾಗದಿರಿ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಕೈಚೆಲ್ಲದಿರಿ. ಸಿಕ್ಕ ಉತ್ತಮ ಸಮಯನ್ನು ಸದ್ಬಳಕೆ ಮಾಡಿಕೊಳ್ಳಿ. (ಭಕ್ತಿಯಿಂದ ಶ್ರೀ ಗ್ರಾಮದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಉದ್ವೇಗ ಕ್ಕೊಳಗಾಗದಿರಿ. ಇಂದಿನ ಗ್ರಹಗತಿಗಳು ನಿಮ್ಮ ರಾಶಿಯ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಒತ್ತಡಗಳು ಎದುರಾದರೂ ಸೂಕ್ತ ರೀತಿಯಲ್ಲಿ ನಿಭಾಯಿಸಲಿದ್ದೀರಿ. (ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಜೀವನ ಮುಂದಿನ ಹಾದಿಯ ಸ್ಪಷ್ಟ ಚಿತ್ರಣಗಳು ನಿಮಗೆ ತಿಳಿದಿದೆ. ನಿಮ್ಮ ಹಾದಿಯಲ್ಲಿ ಇತರರು ಬರದಂತೆ ನೋಡಿಕೊಳ್ಳಿ. ಗೊಂದಲಕ್ಕೊಳಕಾಗದಿರಿ. ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 09:00AM ರಿಂದ 10:30AM
ಗುಳಿಕಕಾಲ: 06:00AM ರಿಂದ 07:30AM
ಯಮಗಂಡಕಾಲ: 01:30PM ರಿಂದ 03:00PM