ದೊಡ್ಡಬಳ್ಳಾಪುರ (Doddaballapura): ಮನೆಯ ಜವಬ್ದಾರಿ ಹೊತ್ತು ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತಾಯಿಗೆ, ಸಹಾಯ ಅಸ್ತನೀಡುವ ಮೂಲಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ನೆರವಾಗಿದೆ.
ದಿನಗೂಲಿ ನೌಕರರಾಗಿ ದೊಡ್ಡಬಳ್ಳಾಪುರದ ಮಾದಗೊಂಡನಹಳ್ಳಿ ರಸ್ತೆ ಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಸ್ವಚ್ಚತೆ ಮತ್ತಿತರ ಕೆಲಸ ಮಾಡಿಕೊಂಡಿದ್ದ ಮಹಿಳಾ ಸಿಬ್ಬಂದಿ ತನ್ನ ಮಗ ರಘು ಎಂಬಾತನಿಗೆ ಅದೇ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿಸಿದ್ದರು.
ದುರದೃಷ್ಟವಶಾತ್ ಆತ ದುಡಿಯುವ ಹೊತ್ತಿಗೆ ನಿಮೋನಿಯ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದ.
ಇತ್ತ ಮಹಿಳಾ ಸಿಬ್ಬಂದಿ ಮಗನ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಒಂದು ಕಡೆ ಮಗನ ಅಗಲಿಕೆ ಮತ್ತೊಂದು ಕಡೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮಹಿಳಾ ಸಿಬ್ಬಂದಿ ನೋವಿಗೆ ಮಿಡಿದ ಪದವಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಧನ ಸಹಾಯ ಮಾಡಿ ಮಾನವೀಯತೆ ಮೆತೆದಿದ್ದಾರೆ.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ .ಹೆಚ್.ವಿ ಅವರು ರತ್ನಮ್ಮ ಅವರಿಗೆ ಹಣ ನೀಡಿ ಸಾಂತ್ವಾನ ಹೇಳುವ ಮೂಲಕ ಅ ತಾಯಿಗೆ ಧೈರ್ಯ ತುಂಬಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರ ಗೌಡ, ಕಾಲೇಜಿನ ಪ್ರಾದ್ಯಾಪಕರಾದ ಶ್ರೀನಿವಾಸ್, ಸಂಘದ ಖಜಾಂಜಿ ಮಹೇಶ್, ಸಂಘದ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.