ಚಿತ್ರದುರ್ಗ Video: ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಮಜೀದ್ ಬಳಿ ಚಳ್ಳಕೆರೆ ಮತ್ತು ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ-150A ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಕಾರು ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ಕಾರು ಚಲಾಯಿಸುತ್ತಿದ್ದ ಮೌಲಾ ಅಬ್ದುಲ್ (35 ವರ್ಷ) ಮತ್ತು ಅವರ ಇಬ್ಬರು ಪುತ್ರರಾದ ರೆಹಮಾನ್ (15 ವರ್ಷ) ಮತ್ತು ಸಮೀರ್ (10 ವರ್ಷ) ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೌಲಾ ಅವರ ಪತ್ನಿ ಸಲೀಮಾ ಬೇಗಂ (31 ವರ್ಷ), ಅವರ ತಾಯಿ ಫಾತಿಮಾ (75 ವರ್ಷ) ಮತ್ತು ಮತ್ತೊಬ್ಬ ಪುತ್ರ ಹುಸೇನ್ ಗಂಭೀರ ಗಾಯಗೊಂಡಿದ್ದಾರೆ.
ಪೊಲೀಸರು ಅವರನ್ನು ಬಳ್ಳಾರಿ ವಿಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಯಾದಗಿರಿ ಮೂಲದ ಈ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಅಲ್ಲಿ ಅವರು ಕೂಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರು ಕಡೆಯಿಂದ ರಾಂಪುರ ಕಡೆ ತೆರಳುತ್ತಿದ್ದ ಕಾರ್ ಪಲ್ಟಿಯಾಗಿದೆ. ಪಕ್ಕದ ಹೈವೇಗೆ ಬಿದ್ದು, ಸರ್ವೀಸ್ ರಸ್ತೆಗೆ ಕಾರು ಉರುಳಿಬಿದ್ದಿದೆ.
ಹೆದ್ದಾರಿಯಲ್ಲಿ ಕಾರ್ ಭೀಕರವಾಗಿ ಪಲ್ಟಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ