ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕನ ಉಳಿಸಲು ಹೋದ ಮೂವರು ಸಂಬಂಧಿಕರು ನೀರುಪಾಲಾಗಿ ಜಲಸಮಾಧಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ಅಂದಹಾಗೆ ಬೆಂಗಳೂರು ಮೂಲದ 35 ವರ್ಷದ ಫರ್ಹೀನಾ, ಚಿಕ್ಕಬಳ್ಳಾಪುರ ನಿವಾಸಿ 35 ವರ್ಷದ ಬಷೀರಾ, ಹಾಗೂ 45 ವರ್ಷದ ಬೆಂಗಳೂರಿನ ಇಮ್ರಾನ್ ಮೃತರು.
ಅಂದಹಾಗೆ ರಂಜಾನ್ ಹಬ್ಬದ ಮುಗಿದ ಕಾರಣ ಮೃತರ ಸಂಬಂಧಿಕರೆಲ್ಲಾ ಸೇರಿ 10 ಮಂದಿ ಮಕ್ಕಳೊಡನೆ ಎರಡು ಕಾರುಗಳ ಮೂಲಕ ಚಿಕ್ಕಬಳ್ಳಾಪುರದ ಸುತ್ತಮುತ್ತಲ ಪ್ರವಾಸಿತಾಣಗಳಿಗೆ ಪಿಕ್ನಿಕ್ ಗೆ ಅಂತ ಹೋಗಿದ್ರು, ಬೆಳಿಗ್ಗೆ ನಂದಿಬೆಟ್ಟಕ್ಕೆ ಹೋಗಿದ್ದು ರಸ್ತೆ ಬಂದ್ ಹಿನ್ನೆಲೆಯಲ್ಲಿ ಶ್ರೀನಿವಾಸ ಸಾಗರದತ್ತ ಹೋಗಿದ್ದಾರೆ.
ಮಧ್ಯಾಹ್ನ ಊಟ ಮಾಡೋಣ ಅಂತ ಜಲಾಶಯದ ಬಂಡೆ ಮೇಲೆ ಕೂತು ಊಟ ಮಾಡೋಕೆ ಮುಂದಾಗಿದ್ರು. ಅಷ್ಟರಲ್ಲಿ ಫರ್ ಹೀನಾರ 6 ವರ್ಷದ ಗಂಡು ಮಗು ಅನಂ ನೀರಿನಲ್ಲಿ ಇಳಿದು ಆಟವಾಡುತ್ತಿದ್ದು.
ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಗೆ ಮುಳುಗಿದ್ದಾನೆ. ಕೂಡಲೇ ಫರಹೀನಾ ಮಗನ ರಕ್ಷಣೆಗೆ ನೀರಿಗೆ ಇಳಿದಿದ್ದು, ನಂತರ ಇಮ್ರಾನ್ ಹಾಗೂ ಬಷೀರಾ ಸಹ ಒಬ್ಬೊಬ್ಬರಾಗಿ ನೀರಿಗೆ ಧುಮುಕಿದ್ದಾರೆ. ಆದ್ರೆ ಅನಂನ ರಕ್ಷಣೆ ಮಾಡಿ ಮೂವರು ಸಹ ಮರಳಿ ಮೃಏಲೆ ಬರಲಾಗದೆ ನೀರಿನಲ್ಲೇ ಮುಳುಗಿದ್ದಾರೆ.
ಅಲ್ಲೇ ಇದ್ದ ಸ್ಥಳೀಯರು ಮೂವರನ್ನ ಮೇಲೆ ತಂದಿದ್ದಾರೆ.. ಅರೆ ಉಸಿರಾಡುತ್ತಿದ್ದವರ ಜೀವ ಉಳಿಸಲು ಮಕ್ಕಳು ಸಿಪಿಆರ್ ಮಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಗೆ ಸೇರಿದ ಅಮ್ಮ ಅಂಬ್ಯುಲೆನ್ಸ್ ಬಂದು ಮೂವರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.. ಆದ್ರೆ ಅರ್ಧಂಬರ್ಧ ಉಸಿರಾಡುತ್ತಿದ್ದ ಮಹಿಳೆ ಸೇರಿ ಮೂವವರು ಸಹ ಮೃತಪಟ್ಟಿದ್ದಾರೆ.
ಮೃತರನ್ನ ಕಳೆದುಕೊಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.