ಪಲನ್‌ಪುರ (Video): ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯಲ್ಲಿನ ದೀಸಾ ಪಟ್ಟಣದಲ್ಲಿನ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಮಂಗಳ ವಾರ ಬೆಳಗ್ಗೆ ಬೆಂಕಿ ಅವಘಡವಾಗಿದ್ದು, 18 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ಮೃತ ಕಾರ್ಮಿಕರೆಲ್ಲರೂ ಮಧ್ಯಪ್ರದೇಶ ರಾಜ್ಯ ದವರು ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲವು ಕಾರ್ಮಿಕರು ಗಾಯಗೊಂಡಿದ್ದು, ದೀಸಾ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಬಹಳ ಗಂಭೀರವಾಗಿದೆ. ಹಾಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರ್ಖಾನೆಯಲ್ಲಿ ಸ್ಪೋಟವಾದಾಗ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದ 18 ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ.
ಕೆಲವರು ಸೋಟದ ತೀವ್ರತೆಯಿಂದ ಗಾಯಗೊಂಡು ಮಡಿದರೆ, ಕೆಲವರು ಕುಸಿದ ಗೋದಾಮಿನ ಛಾವಣಿಯಡಿ ಸಿಲುಕಿ ಸಾವಿಗೀಡಾಗಿದ್ದಾರೆ.