Site icon Harithalekhani

3A, 3B ವರ್ಗದವರಿಗೂ ಮೀಸಲಾತಿ ನೀಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

Give reservation to 3A, 3B categories also: Nikhil Kumaraswamy demands

Give reservation to 3A, 3B categories also: Nikhil Kumaraswamy demands

ಬೆಂಗಳೂರು: 134 ಶಾಸಕರನ್ನ ಹೊಂದಿರುವ ರಾಜ್ಯ ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ತಾರತಮ್ಯ ಮಾಡ್ತಿದೆ. 3A, 3B ಬಿ ವರ್ಗದವರು ಏನು ದ್ರೋಹ ಮಾಡಿದ್ದಾರೆ. ಚುನಾವಣೆಯಲ್ಲಿ ಉಳಿದ ಸಮುದಾಯಗಳು ನಿಮ್ಮ ಜತೆ ನಿಲ್ಲಲಿಲ್ಲವೇ.? ನಿಮ್ಮಲ್ಲಿರುವ ಅಜೆಂಡಾ ಹೇಳಿ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದರು.

ಈ ಬಗ್ಗೆ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗುತ್ತಿಗೆಯಲ್ಲಿ 4% ಮೀಸಲಾತಿಯನ್ನ 2B ವರ್ಗದವರಿಗೆ ಕೊಟ್ಟಿದ್ದಿರಲ್ಲಾ. ಆರ್ಥಿಕವಾಗಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ನಿಮ್ಮ ನಾಯಕರು ಸಂವಿಧಾನದವನ್ನ ಉಳಿಸುತ್ತೇವೆ ಎಂದು ಸಂವಿಧಾನದ ಪುಸ್ತಕವನ್ನ ಕೈಯಲ್ಲಿ ಇಡಿದು ಗಂಟೆ ಅಲ್ಲಾಡಿಸಿದಂಗೆ ಅಲ್ಲಾಡಿಸುವುದನ್ನ ನೋಡಿದ್ದೇವೆ. ಈ ರೀತಿ ಓಲೈಕೆ ರಾಜಕೀಯ ಮಾಡಿ ಏಕ ಸಮುದಾಯವನ್ನ ಮೆಚ್ಚಿಸುವುದಕ್ಕೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ನಿಮ್ಮ ಅಜೆಂಡ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆಯಲ್ಲಿ 4% ಮೀಸಲಾತಿಯನ್ನು ಒಂದು ಸಮುದಾಯಕ್ಕೆ ಕೊಡಬೇಡಿ ಎಂದು ನಾವು ವಿರೋಧ ಮಾಡ್ತಿಲ್ಲ. 3A, 3B ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಎಲ್ಲರಿಗೂ ಸಮಾನತೆಯಿಂದ ಮೀಸಲಾತಿ ನೀಡಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಆಗ್ರಹ ಮಾಡಿದರು.

JDS-ಬಿಜೆಪಿ ಮಧ್ಯೆ ಯಾವುದೇ ಗೊಂದಲವಿಲ್ಲ

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರಕ್ಕೆ ಮಾತನಾಡಿದ ಅವರು, ನಾಳೆ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಪ್ರತಿಭಟನೆ ಮಾಡ್ತಿದ್ದಾರೆ.

ಮಿತ್ರ ಪಕ್ಷವಾಗಿ ಸದನದ ಒಳಗಡೆ ಮತ್ತು ಹೊರಗೆ ಸರ್ಕಾರವನ್ನ ಎಚ್ಚರಿಸುವ ಜವಾಬ್ದಾರಿ ಇದೆ. ಆಗಾಗಿ ಬಿಜೆಪಿ ಹೋರಾಟಕ್ಕೆ ಘೋಷಣೆ ಕೊಟ್ಟಿದ್ದಾರೆ. ಅದೇ ರೀತಿ ಬೆಲೆ ಏರಿಕೆ ವಿಚಾರಕ್ಕೆ ಜೆಡಿಎಸ್ ಪಕ್ಷವು ಕೂಡ ಹೋರಾಟ ಹೇಗೆ ಇರುತ್ತೆ ಅಂತ ಅತೀ ಶೀಘ್ರದಲ್ಲಿ ತಿಳಿಸುತ್ತೇನೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಿಳಿಸಿದರು.

JDS-ಬಿಜೆಪಿ ಮಧ್ಯೆ ಯಾವುದೇ ಗೊಂದಲವಿಲ್ಲ

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರಕ್ಕೆ ಮಾತನಾಡಿದ ಅವರು, ನಾಳೆ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಪ್ರತಿಭಟನೆ ಮಾಡ್ತಿದ್ದಾರೆ. ಮಿತ್ರ ಪಕ್ಷವಾಗಿ ಸದನದ ಒಳಗಡೆ ಮತ್ತು ಹೊರಗೆ ಸರ್ಕಾರವನ್ನ ಎಚ್ಚರಿಸುವ ಜವಾಬ್ದಾರಿ ಇದೆ. ಆಗಾಗಿ ಬಿಜೆಪಿ ಹೋರಾಟಕ್ಕೆ ಘೋಷಣೆ ಕೊಟ್ಟಿದ್ದಾರೆ. ಅದೇ ರೀತಿ ಬೆಲೆ ಏರಿಕೆ ವಿಚಾರಕ್ಕೆ ಜೆಡಿಎಸ್ ಪಕ್ಷವು ಕೂಡ ಹೋರಾಟ ಹೇಗೆ ಇರುತ್ತೆ ಅಂತ ಅತೀ ಶೀಘ್ರದಲ್ಲಿ ತಿಳಿಸುತ್ತೇನೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಿಳಿಸಿದರು.

ಸಿನಿಮಾ ತೋರಿಸಿದ್ದೆ ಬೇರೆ, ಟೀಸರ್ ನೋಡ್ತಿರೋದೆ ಬೇರೆ

ಹನಿಟ್ರ್ಯಾಪ್ ವಿಚಾರಕ್ಕೆ ಮಾತನಾಡಿದ ಅವರು, ಸದನದ ಒಳಗೆ ಅವರ ಪಕ್ಷದ ಪ್ರಭಾವಿ ಸಚಿವರೇ ಹೇಳಿದ್ದಾರೆ ಇದರ ಹಿಂದೆ ಯಾರೇ ಇರಲಿ ತನಿಖೆ ಮಾಡಿಸಿ ಅಂತ ಹೇಳಿದ್ರು, ಆದರೆ ಸಿನಿಮಾ ತೋರಿಸಿದ್ದೆ ಬೇರೆ, ಟೀಸರ್ ನೋಡ್ತಿರೋದೆ ಬೇರೆ.

ಈ ಪ್ರಕರಣವನ್ನ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಕಳೆದ ಎರಡು ವರ್ಷಗಳಲ್ಲಿ ನಡೆದ ಪ್ರಕರಣಗಳಲ್ಲಿ ಹೇಗೆ ತನಿಖೆಯಾಯ್ತು..? ಆದರೆ ಈ ಪ್ರಕರಣದಲ್ಲಿ ಯಾಕೆ ತನಿಖೆಗೆ ಆ ವೇಗ ಸಿಗುತ್ತಿಲ್ಲ ಸರ್ಕಾರ ಪಾರದರ್ಶಕ ತನಿಖೆ ನಡೆಸಿ ಹನಿಟ್ರ್ಯಾಪ್, ಕೊಲೆ ಸುಫಾರಿ ಯಾರು ಎಂಬುದನ್ನ ಜನತೆಯ ಮುಂದಿಡಬೇಕು ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

Exit mobile version