ದೊಡ್ಡಬಳ್ಳಾಪುರ (Doddaballapura): ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ ಭಾನುವಾರ ಸಂಭ್ರಮದಿಂದ ನಡೆದಿದೆ. ಸೋಮವಾರ ನಡೆಯಬೇಕಿದ್ದ ಹೊಸತೊಡಕು ಇಂದು (ಮಂಗಳವಾರಕ್ಕೆ ಬದಲಾಗಿದೆ).
ಈ ಹಿನ್ನೆಲೆಯಲ್ಲಿ ಗ್ರಾಹಕರು ಮಟನ್, ಚಿಕನ್ ಸ್ಟಾಲ್ ಮುಂದೆ ಕ್ಯೂ ನಿಂತಿದ್ದಾರೆ. ಮುಂಜಾನೆಯಿಂದಲೇ ಮಟನ್, ಚಿಕನ್ ಅಂಗಡಿಗಳ ಮುಂದೆ ಜನರು ಜಮಾಯಿಸಿದ್ದಾರೆ..
ಯುಗಾದಿಯ ಸಿಹಿ ತಿಂದ ಮೇಲೆ ಹಬ್ಬದ ರಜದಲ್ಲಿ ಮಾಂಸದ ಅಡುಗೆ ಮಾಡುವ ಪದ್ದತಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ನೆಂಟರು, ಸ್ನೇಹಿತರೆಲ್ಲ ಕೂಡಿ ವಿಭಿನ್ನ ರೀತಿಯ ಮಾಂಸಾಹಾರ ಖಾದ್ಯಗಳನ್ನು ತಯಾರಿಸಿ ತಿನ್ನುವ ಹಬ್ಬ ಇದಾಗಿದೆ.
ಹೊಸ ತಡುಕು ಎಂದು ಸಾಮಾನ್ಯರಲ್ಲಿ ಕರೆಯುವ ಹಬ್ಬದ ಮಾರನೇ ದಿನ ಮಾಂಸದ ಅಂಗಡಿಗಳಲ್ಲಿ ಮಾಂಸ ಖರೀದಿ ನಡೆಯುತ್ತದೆ. ಆದರೆ ಈ ಬಾರಿ ಹಬ್ಬದ ಮಾರನೇ ದಿನ ಸೋಮವಾರವಾದ್ದರಿಂದ ಮಾಂಸ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು.

ಅದಕ್ಕೆ ವ್ಯತಿರಿಕ್ತವಾಗಿ ಇಂದು ದೊಡ್ಡಬಳ್ಳಾಪುರ ನಗರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಹೊಸ ತೊಡಕು ಆಚರಣೆ ಮಾಡಲಾಗುತ್ತಿದ್ದು, ಕೆಲ ಗ್ರಾಮಗಳಲ್ಲಿ ಗುಡ್ಡೆ ಮಾಂಸದ ವ್ಯಾಪಾರ ನಡೆದಿದೆ.
ಮಾರುಕಟ್ಟೆಯಲ್ಲಿ 800ರಿಂದ 1000ರ ವರೆಗೆ ಮೇಕೆ, ಕುರಿ ಮಾಂಸ ಮಾರಾಟವಾದರೆ, ಕೋಳಿ ರೆಡಿ ಚಿಕನ್ 210 ರೂ., ಮೊಟ್ಟೆಕೋಳಿ ರೆಡಿ ಚಿಕನ್ 160 ರೂ., ರಾಣಿ ಬಾಯ್ಲರ್ 180 ರೂ.ಕ್ಕೆ, ಬಾಯ್ಲರ್ ಕೋಳಿ 152ರೂ. ರಾಣಿ ಬಾಯ್ಲರ್ 130 ರೂ., ಮೊಟ್ಟೆ ಕೋಳಿ 123 ರೂ. ಮಾರಾಟವಾಗುತ್ತಿದೆ.
ಬೆಳಗ್ಗೆಯಿಂದ ಗ್ರಾಹಕರು ನೆಮ್ಮದಿಯಿಂದ ಮಾಂಸ ಖರೀದಿ ನಡೆಸುತ್ತಿದ್ದಾರೆ, ಎಲ್ಲೆಡೆ ಬೆಳಗ್ಗೆಯಿಂದಲೂ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಪೂರೈಸಲಾಗುತ್ತಿದೆ ಎಂದು ಹೆಚ್.ಎ.ಜೆ.ಚಿಕನ್ ಸೆಂಟರ್ ಮಾಲೀಕರಾದ ಅಂಬರೀಶ್ ತಿಳಿಸಿದ್ದಾರೆ.