ದೊಡ್ಡಬಳ್ಳಾಪುರ (Doddaballapura): ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಗಂಟೆ ಅವಧಿಯಲ್ಲಿ 5 ಮಂದಿ ಸಾವನಪ್ಪಿರುವ ಘಟನೆ ವರದಿಯಾಗಿದ್ದು, ಇದರಲ್ಲಿ 3 ಆತ್ಮಹತ್ಯೆ ಪ್ರಕರಣಗಳಾಗಿವೆ.
ವರದನಹಳ್ಳಿ
ವರದನಹಳ್ಳಿಯಲ್ಲಿ ಆನಂದ್ ಎಂಬಾತ ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಗಶೆಟ್ಟಿಹಳ್ಳಿ
40 ವರ್ಷದ ಅರುಣ ಎಂಬ ಮಹಿಳೆ ತಾಲೂಕಿನ ನಾಗಶೆಟ್ಟಿಹಳ್ಳಿಯಲ್ಲಿ ಸಾವನಪ್ಪಿದ್ದಾರೆ.
ಲೇಔಟ್
ತಾಯಿಯ ಅಗಲಿಕೆಯಿಂದ ನೊಂದು ಮಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಟಿಬಿ ನಾರಾಯಣಪ್ಪ ಬಡಾವಣೆಯಲ್ಲಿ ನಡೆದಿದೆ.
ಮೃತನ್ನು 25 ವರ್ಷದ ರಕ್ಷಿತ್ ಬಾಬು ಎಂದು ಗುರುತಿಸಲಾಗಿದೆ.
ಖಾಸ್‌ಬಾಗ್
ನಿತ್ರಾಣನಾದ ವ್ಯಕ್ತಿಯೋರ್ವ ಚರಂಡಿಯಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಖಾಸ್‌ಬಾಗ್ ನಲ್ಲಿ ವರದಿಯಾಗಿದೆ.
ಮೃತನನ್ನು 30 ವರ್ಷದ ಸುಧೀರ್ ಕುಮಾರ್ ಚೌದರಿ ಎಂದು ಗುರುತಿಸಲಾಗಿದ್ದು, ಬಿಹಾರ ಮೂಲದವನು ಎನ್ನಲಾಗಿದೆ.
ಅಪಘಾತ
ದೇವನಹಳ್ಳಿ – ದಾಬಸ್‌ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ಮೋಪರಹಳ್ಳಿ ಬಳಿ ದೇವನಹಳ್ಳಿ ಕಡೆಯಿಂದ ಬಂದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾರೆ.
ಬ್ಯಾಟರಾಯನಪುರ ಸಮೀಪದ ಕೆಂಪಾಪುರದ ನಿವಾಸಿ ಮದನ್ ಕುಮಾರ್ ಸಂಡೂರು (20) ಎಂದು ಗುರುತಿಸಲಾಗಿದೆ.