ದೊಡ್ಡಬಳ್ಳಾಪುರ, (Doddaballapura): ಬಿಸಿಲಿನ ತಾಪಕ್ಕೆ ಒಣಗಿದ್ದ ಗಿಡಗಳಿಗೆ ಬೆಂಕಿ ತಗುಲಿದ ಪರಿಣಾಮ ಕಾರೊಂದು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಡಿಕ್ರಾಸ್ ರಸ್ತರಯಲ್ಲಿನ ನಗರ ಪೊಲೀಸ್ ಠಾಣೆ ಬಳಿ ಸಂಭವಿಸಿದೆ.
ವಿದ್ಯುತ್ ಟ್ರಾನ್ಸ್ ಪಾರ್ಮರ್ ಬಳಿ ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಒಂದು ಕಾರು ಸುಟ್ಟು ಭಸ್ಮವಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಯಿತು.
ಅಕ್ಕ ಪಕ್ಕದಲ್ಲಿದ್ದ ಗಿಡ ಮರಗಳಿಗೂ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಿಯಂತ್ರಿಸಿದರು.