Site icon Harithalekhani

Doddaballapura: ಕೊಲೆ ಆರೋಪಿಗೆ ಕಠಿಣ ಜೀವಾವಧಿ ಕಾರಾಗೃಹ ಶಿಕ್ಷೆ..!

Doddaballapura: Murder accused sentenced to life imprisonment..!

Doddaballapura: Murder accused sentenced to life imprisonment..!

ದೊಡ್ಡಬಳ್ಳಾಪುರ (Doddaballapura); ಸೈಟ್ ವಿವಾದದಲ್ಲಿ ಮಹಿಳೆಯೋರ್ವ ಹತ್ಯೆ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ನಿವಾಸಿ ದಿನೇಶ್ ಎನ್ನುವವರು 2018 ಆಗಸ್ಟ್ 18 ರಂದು ಪುಟ್ಟಮ್ಮ ಎನ್ನುವವರನ್ನು ಸೈಟ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹತ್ಯೆ ಮಾಡಿದ್ದರು ಎಂದು ಹೊಸಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆದಿದ ಪೊಲೀಸರು ಆರೋಪಿ ದಿನೇಶನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ವಾದ ಪ್ರತಿವಾದ ಆಲಿಸಿದ ದೊಡ್ಡಬಳ್ಳಾಪುರದ 4 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ದುರುಗಪ್ಪ ಏಕಬೋಟೆ ಅವರು ಆರೋಪಿ ದಿನೇಶ್‌ಗೆ ಕಠಿಣ ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂಗಳ ದಂಡವನ್ನು ವಿಧಿಸಿ ತೀರ್ಪನ್ನು ನೀಡಿದ್ದಾರೆ.

ಅಲ್ಲದೆ ಇದೇ ಪ್ರಕರಣದಲ್ಲಿ ಮತ್ತೊಂದು ಸೆಕ್ಷನ್ 1860ರ ಕಲಂ 324ರ ಅಪರಾಧಿ ದಿನೇಶ್ಗೆ ಎರಡು ವರ್ಷ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡವನ್ನು ಸಹ ವಿಧಿಸಲಾಗಿದೆ.

ಸರ್ಕಾರದ ಪರ ನ್ಯಾಯವಾದಿ ನಟರಾಜ್ ವಾದ ಮಂಡಿಸಿದ್ದು, ಎಸ್ಪಿ ಸಿಕೆ ಬಾಬಾ, ಡಿವೈಎಸ್ಪಿ ರವಿ ಸೂಚನೆ ಅಡಿಯಲ್ಲಿ ಆಗಿನ ಇನ್ಸ್ಪೆಕ್ಟರ್ ಸಿದ್ದರಾಜು, ಈಗಿನ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ತನಿಖೆಯ ನೇತೃತ್ವ ವಹಿಸಿದ್ದರು.

ಕೋರ್ಟ್ ಮಾನಿಟರಿಂಗ್ ಸೆಲ್ನ ಎಎಸ್ಐ ಸಿದ್ದಲಿಂಗಯ್ಯ, ನರಸಿಂಹ ಮೂರ್ತಿ, ಹರೀಶ್ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

Exit mobile version