ಬೆಂಗಳೂರು: ಬಿಜೆಪಿಯಿಂದ (BJP) ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gouda Patila Yatnal) ಉಚ್ಚಾಟನೆ ಕುರಿತು ಬಹುತೇಕ ಹಿಂದೂ ಕಾರ್ಯಕರ್ತರು ಹೈಕಮಾಂಡ್ ನಿಲುವನ್ನು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ತಮ್ಮ ತಮ್ಮ ಖಾತೆಗಳಲ್ಲಿ ಈ ವಿಚಾರ ಚರ್ಚಿಸಿ ಪ್ರಶ್ನೆ ಎತ್ತಿರುವ ಬಿಜೆಪಿ ಕಾರ್ಯಕರ್ತರು, ಸ್ವಾಭಿಮಾನಿ ಕಾರ್ಯಕರ್ತರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಹೊರಬರಬೇಕು. ಹಿಂದುತ್ತದ ಪರ ಇರುವ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಟ್ವಿಟ್ಟರ್ ಖಾತೆಯಲ್ಲಿ ಯತ್ನಾಳ್ ಅವರನ್ನು ಬೆಂಬಲಿಸಿ ಟ್ವಿಟ್ ಹಾಕಲಾಗಿದೆ. ಅದರಲ್ಲಿ, ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ, ಕೆಪಿಎಸ್‌ಸಿ ಭ್ರಷ್ಟರ ವಿರುದ್ಧ ನಮ್ಮ ಜತೆ ನಿಂತಿದ್ದ ಯತ್ನಾಳ್ ಅವರಿಗೆ ನಮ್ಮ ಬೆಂಬಲ ಎಂದೆಂದಿಗೂ ಇದೇ ಇರುತ್ತದೆ.
ಒಂದು ಪಾರ್ಟಿ ನ್ಯಾಯದ ಪರವಾಗಿ, ನಿಲ್ಲುತ್ತಿದ್ದ ನಾಯಕನನ್ನು ಉಚ್ಚಾಟನೆ ಮಾಡಿದರೆ ಬಿಜೆಪಿ ಸರಿಯಿಲ್ಲ ಎಂದು ಎನಿಸುತ್ತಿದೆ. ಹೊಸ ಅಧ್ಯಾಯ ಶುರುವಾಗಲಿ ಬಸನಗೌಡ ಪಾಟೀಲ್ ಅವರದ್ದೇ ಪ್ರತ್ಯೇಕ ಬಿಜೆಪಿ ಎಂದು ಆಗ್ರಹಿಸಿದೆ.
ಇನ್ನೂ ಸನಾತನ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಿಂದೂಗಳಿಂದ ಬಿಜೆಪಿ, ಬಿಜೆಪಿಯಿಂದ ಹಿಂದೂಗಳಲ್ಲ. ಬಸನಗೌಡ ಯತ್ನಾಳ್ ಅವರನ್ನು ಹೊಂದಾಣಿಕೆ ರಾಜಕಾರಣಿಗಳು, ವಂಶಪಾರಂಪರ್ಯ ರಾಜಕಾರಣಿಗಳು ತುಳಿದಿರಬಹುದು. ಆದರೆ ಹಿಂದೂಗಳ ಒಗ್ಗಟ್ಟನ್ನು ತುಳಿಯಲಾಗುವುದಿಲ್ಲ ಎಂದಿದೆ.
ಯತ್ನಾಳ್ ಬಣದ ಸಭೆ
ಯತ್ನಾಳ್ ಉಚ್ಚಾಟನೆ ಕ್ರಮವನ್ನು ಕೇಂದ್ರದ ವರಿಷ್ಟರು ಮರುಪರಿಶೀಲನೆ ಮಾಡಬೇಕು ಎಂಬ ಕೂಗು ಹೆಚ್ಚಾಗಿದ್ದು, ಶಿಸ್ತು ಕ್ರಮ ವಿರೋಧಿಸಿ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಯತ್ನಾಳ್ ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಲು ಯತ್ನಾಳ್ ಬಣದ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ.
ಯತ್ನಾಳ್ ಉಚ್ಚಾಟನೆ ಕ್ರಮ ಪ್ರಶ್ನಿಸಲು ರೆಬೆಲ್ ನಾಯಕರುಗಳು ತಯಾರಿ ನಡೆಸಿದ್ದಾರೆ. ಅಲ್ಲದೆ, ಉಚ್ಚಾಟನೆ ಬಳಿಕ ಯಾರನ್ನೂ ಭೇಟಿ ಮಾಡದ ಯತ್ನಾಳ್ ತಮ್ಮ ಬಣದ ನಾಯಕರ ಜತೆಗೆ ಸಭೆ ಮಾಡಿದ್ದಾರೆ.
ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಸದಾಶಿವ ನಗರದ ನಿವಾಸದಲ್ಲಿ ಸಭೆ ನಡೆಸಲು ತೀರ್ಮಾನಿಸಲಿತ್ತಾ ದರೂ ಅಂತಿಮ ಹಂತದಲ್ಲಿ ಬೆಂಗಳೂರಿನ ಯು.ಬಿ.ಸಿಟಿಯಲ್ಲಿರುವ ಮಾಜಿ ಸಂಸದ ಜಿ. ಎಂ.ಸಿದ್ದೇಶ್ವರ್ ಅವರ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಮೇಶ್ ಜಾರಕಿ ಹೊಳಿ, ಜಿ.ಎಂ.ಸಿದ್ದೇಶ್ವರ್, ಕುಮಾರ್ ಬಂಗಾ ರಪ್ಪ, ಎನ್.ಆರ್.ಸಂತೋಷ್ ಸೇರಿದಂತೆ ಹಲ ವರು ಉಪಸ್ಥಿತರಿದ್ದರು.
ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವ ಕುಮಾರ ಬಂಗಾರಪ್ಪ, 6 ವರ್ಷಗಳ ಯತ್ನಾಳ್ ಉಚ್ಚಾಟನೆ ನೋವು ತರಿಸಿದೆ. ಹಾಗಂತ ವರಿಷ್ಠರ ನಿರ್ಧಾರ ಪ್ರಶ್ನಿಸುವುದಿಲ್ಲ. ಈ ಬಗ್ಗೆ ಎಲ್ಲರೂ ಕೂತು ಚರ್ಚೆ ಮಾಡಿದ್ದೇವೆ.
ಶೋಕಾಸ್ ನೋಟಿ ಸ್‌ಗೆ ಉತ್ತರಿಸಲು ಬಿ. ಬಿ.ಪಿ.ಹರೀಶ್ ಅವರಿಗೆ ಇಂದು (ಶುಕ್ರವಾರ) ಅಂತಿಮ ದಿನ. ಅವರು ಹೇಗೆ ಉತ್ತರ ಕೊಡಬೇಕು ಎಂಬ ಬಗ್ಗೆ ಮಾರ್ಗ ದರ್ಶನ ಮಾಡಲಾಗಿದೆ. ಕಾನೂನು ತಂಡದ ಸಲಹೆ ಜತೆಗೆ ಮಾರ್ಗದರ್ಶನ ಮಾಡಿದ್ದೇವೆ.
ನಾವು ಬಹಳಷ್ಟು ಬಾರಿ ವರಿಷ್ಠರಿಗೆ ಹೇಳಿದ್ದೇವೆ. ಆದರೆ ಆಘಾತದ ರೀತಿಯಲ್ಲಿ ಕ್ರಮ ಮಾಡಿದ್ದಾರೆ. ಹೊಸ ಪಕ್ಷ ಸ್ಥಾಪನೆ ಅಥವಾ ಬೇರೆ ಯಾವುದೇ ರೀತಿಯ ಆಲೋಚನೆ ಮಾಡಿಲ್ಲ.
ನಾವು ಏನು ಕೇಳಿದ್ದೀವಿ ಅದಕ್ಕೆ ವರಿಷ್ಠರು ಸ್ಪಂದಿಸಿ ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಕೊಡುವ ನಿರೀಕ್ಷೆ ಇದೆ. ಉಚ್ಚಾಟನೆಯನ್ನು ಹೈಕಮಾಂಡ್ ಮರುಪರಿಶೀಲನೆ ಮಾಡಬೇಕು ಎಂದರು.