Astrology: Possibility of hearing good news

ದಿನ ಭವಿಷ್ಯ: ಮಾ.28, ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ

Astrology: ಶುಕ್ರವಾರ, ಮಾರ್ಚ್ 28, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ಲಾಭ ಸ್ಥಾನ ಗತನಾದ ಗುರುವಿನಿಂದಾಗಿ ಅನಿರೀಕ್ಷಿತ ಎಷ್ಟೋ ಕಾರ್ಯ ಸಾಧನೆಯಾಗಲಿವೆ. ಮುಖ್ಯವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ವೃಷಭ ರಾಶಿ: ಆರ್ಥಿಕವಾಗಿ ಹಾಗೂ ಸಾಂಸಾರಿಕವಾಗಿ ಉತ್ತಮ ಕೆಲಸಗಳಾದರೂ ಕೆಲವು ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾಗಲಿದೆ.
ಹೊಗಳಿಕೆಗೆ ಮರುಳಾಗದಿರಿ.
ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು. (ಭಕ್ತಿಯಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ, ಮುಖ್ಯವಾಗಿ ಯಾವುದೇ ಕೆಲಸಕಾರ್ಯ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಬಹುದು, ಜಾಗರೂಕರಾಗಿರಿ. (ಭಕ್ತಿಯಿಂದ ಶ್ರೀ ಶಿರಡಿ ಸಾಯಿಬಾಬ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಮಕ್ಕಳ ವಿದ್ಯಾ ಭ್ಯಾಸ, ಉದ್ಯೋಗದ ಸಮಸ್ಯೆ ಕಂಡು ಬರಬಹುದು. ನಿಮ್ಮ ತಾಳ್ಮೆಗೆ ಇದು ಸಕಾಲವೆನಿಸಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಸಿಂಹ ರಾಶಿ: ಕೆಟ್ಟ ಜನರ ಸಹವಾಸದಿಂದ ಅಪಕೀರ್ತಿ ಉಂಟಾದೀತು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗರೂಕ ರಾಗಿರಿ. ಕೌಟುಂಬಿಕ ಸಮಸ್ಯೆಗಳು ಕಾಡಬಹುದು. ನೌಕರ ವರ್ಗದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ. (ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ವಿಘ್ನ ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ ಸಂಯಮದಿಂದ ವ್ಯವಹರಿಸಿ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಏಕಾದಶ ಸ್ಥಾನ ರಾಹುವಿನಿಂದಾಗಿ ಹಾಗೂ ಶನಿಯ ಲಾಭಸ್ಥಾನದಿಂದಾಗಿ ಉನ್ನತಿ ಬರಲಿದೆ, ಅದಾಗ್ಯೂ ಗುರುವಿನ ವ್ಯಯಸ್ಥಿತಿ ಅನೇಕ ರೀತಿಯ ಖರ್ಚುವೆಚ್ಚಗಳ ಹಾದಿ ಎದುರಾಗಬಹುದು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ. (ಭಕ್ತಿಯಿಂದ ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಮಹಿಳೆಯರಿಗೆ ಉದ್ಯೋಗ ಲಾಭವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಆಲಸ್ಯ,ಉದಾಸೀನತೆ ಉಂಟಾಗಬಹುದು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಧನಸ್ಸು ರಾಶಿ: ಉದ್ಯೋಗಿಗಳಿಗೆ ವಿದೇಶದಲ್ಲಿ ಆಕರ್ಷಕವಾದ ದುಡಿಮೆಗೆ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ. ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳು, ಕ್ರಿಯಾಶೀಲತೆಯಲ್ಲಿ ಪ್ರಶಂಸೆ ಸಿಗಲಿದೆ. ಮುಖ್ಯವಾಗಿ ನಿಮ್ಮ ವಿಶ್ವಾಸ ದುರುಪಯೋಗವಾಗ ದಂತೆ ನಿಮ್ಮಲ್ಲಿ ಎಚ್ಚರವಹಿಸಿ. ಮಾತಿನಿಂದ ಅನಾವಶ್ಯಕ ಮನಸ್ತಾಪವಾಗದಂತೆ ಜಾಗ್ರತೆ ವಹಿಸಿರಿ. (ಭಕ್ತಿಯಿಂದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಕ್ರೀಡಾ ಜಗತ್ತಿನ ಪಟುಗಳಿಗೆ ಜಯವುಕಾದಿದೆ. ಹದಗೆಟ್ಟ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಲಿದೆ. ಕೃಷಿ ಹಾಗೂ ರೈತವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭವನ್ನು ಕೊಡಲಿದೆ. ಆರೋಗ್ಯದಲ್ಲಿ ಜಾಗ್ರತೆ. (ಭಕ್ತಿಯಿಂದ ಕುಲ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜೀವನದ ಬಹುಮುಖ್ಯ ಗುರಿ ಯೊಂದನ್ನು ಸಾಧಿಸಲಿದ್ದೀರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರಲಿವೆ. ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ರಾಹುಕಾಲ: 10:30AM ರಿಂದ 12:00PM
ಗುಳಿಕಕಾಲ: 07:30AM ರಿಂದ 09:00AM
ಯಮಗಂಡಕಾಲ: 03:00PM ರಿಂದ 04:30PM

ರಾಜಕೀಯ

ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ; ಬಿ. ಮುನೇಗೌಡ ನೇತೃತ್ವದಲ್ಲಿ 90 ಬಸ್ಸುಗಳಲ್ಲಿ ಕಾರ್ಯಕರ್ತರು ಭಾಗಿ

ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ; ಬಿ. ಮುನೇಗೌಡ ನೇತೃತ್ವದಲ್ಲಿ 90 ಬಸ್ಸುಗಳಲ್ಲಿ ಕಾರ್ಯಕರ್ತರು

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ (B.Munegowda) ನೇತೃತ್ವದಲ್ಲಿ 90 ಬಸ್ಸು

[ccc_my_favorite_select_button post_id="105238"]
ಘಾಟಿಯನ್ನು ಪ್ರಸಿದ್ಧ ಯಾತ್ರಾ ಕ್ಷೇತ್ರವನ್ನಾಗಿ ಅಭಿವೃದ್ಧಿ: ಡಿಸಿಎಂ ಡಿಕೆ ಶಿವಕುಮಾರ್‌

ಘಾಟಿಯನ್ನು ಪ್ರಸಿದ್ಧ ಯಾತ್ರಾ ಕ್ಷೇತ್ರವನ್ನಾಗಿ ಅಭಿವೃದ್ಧಿ: ಡಿಸಿಎಂ ಡಿಕೆ ಶಿವಕುಮಾರ್‌

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಕುಟುಂಬ ಸಮೇತ ಇಂದು ಭೇಟಿ ನೀಡಿ ವಿಶೇಷ

[ccc_my_favorite_select_button post_id="105266"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ DK Shivakumar

[ccc_my_favorite_select_button post_id="105178"]
ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಪವನ್ ತನ್ನ ತಂದೆಯ ಜೊತೆಯಲ್ಲಿ ಕೃಷಿಯಲ್ಲಿ ತೊಡಗಿದ್ದ, ಕಳೆದ ಮೂರು ವರ್ಷದಿಂದ ಸರಿಯಾಗಿ ಬೆಳೆ ಬಾರದೇ ಪವನ್ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. Suicide

[ccc_my_favorite_select_button post_id="105172"]
Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

Video: ಹೆಲಿಕಾಪ್ಟರ್ ಪತನ.. ಮಕ್ಕಳು ಸೇರಿ 6 ಮಂದಿ ದುರ್ಮರಣ

ಹೆಲಿಕಾಪ್ಟರ್‌ನ ಮುಖ್ಯ ರೋಟರ್‌ಗಳು ಬಾಲ ಬೂಮ್‌ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. helicopter

[ccc_my_favorite_select_button post_id="105183"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!