ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (BJP) ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಮುಂದಾದ ಹೈಕಮಾಂಡ್, ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಬಳಿದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಶಿಸ್ತು ಉಲ್ಲಂಘನೆ ಆರೋಪದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದು ವಿಜಯೇಂದ್ರ ಬಣದ ಕೈ ಮೇಲಾದಂತೆ ಕಂಡಿದ್ದು, ಹೈಕಮಾಂಡ್ ನಡೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಪಕ್ಷದ ಶಿಸ್ತು ಉಲ್ಲಂಘನೆ ವಿಚಾರವಾಗಿ ಫೆ.10ರಂದು ಯತ್ನಾಳ್ ಅವರಿಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿ 72 ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಿತ್ತು. ಅದರಂತೆ, ಫೆ.10ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನೀವು ನೀಡಿದ್ದ ಉತ್ತರ ಪರಿಗಣಿಸಿದ್ದೇವೆ.
ಪಕ್ಷದಲ್ಲಿ ಉತ್ತಮ ನಡವಳಿಕೆಯ ಬಗ್ಗೆ ತಾವು ನೀಡಿರುವ ಆಶ್ವಾಸನೆಯ ಬಳಿಕವೂ ಪದೇ ಪದೆ ಶಿಸ್ತು ನಿಯಮ ಉಲ್ಲಂಘನೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದಿಂದ ಉಚ್ಚಾಟನೆ ಮಾಡುತ್ತಿರುವುದಾಗಿ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಪಕ್ಷ ಕೈಗೊಂ ಡಿರುವ ನಿರ್ಧಾರವನ್ನು ಅಧಿಕೃತವಾಗಿ ಯತ್ನಾಳ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾ ಗಿದ್ದು, ಪಕ್ಷದ ಇತರ ಜವಾಬ್ದಾರಿ ಗಳಿಂದಲೂ ಅವರನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಯತ್ನಾಳ್‌ರನ್ನು ಸದಾನಂದ ಗೌಡ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲೂ ಒಮ್ಮೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಅವರು ಜೆಡಿಎಸ್ ಸೇರ್ಪಡೆಗೊಂಡು, ಮತ್ತೆ ಬಿಜೆಪಿಗೆ ಮರಳಿದ್ದರು.
ಅಭಿಯಾನ
ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್ ಬೆಂಬಲಿಗರು ಮತ್ತು ವಿಜಯೇಂದ್ರ ಬೆಂಬಲಿಗರ ನಡುವೆ ಮಾತಿನ ಸಮರ ನಡೆದಿದೆ.
ಇನ್ನೂ ಎರಡು ಬಣದ ಸೇರದ ಹಿಂದುತ್ವವಾದಿಗಳು #i_heat_bjp, #i_heat_bjp_highcommand ಎಂದು ಅಭಿಯಾನ ಆರಂಭಿಸಿದ್ದಾರೆ.
ಅಲ್ಲದೆ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಮುಸ್ಲಿಂ ಸಮುದಾಯಕ್ಕೆ ರಂಜಾನ್ ಕಿಟ್ ಕೊಟ್ಟವರು, ಹಿಂದುತ್ವ ಪರ ಇರುವವರನ್ನು ಪಕ್ಷದಿಂದ ದೂರು ಮಾಡುತ್ತಿದ್ದಾರೆ.
ನಿಜವಾಗಿಯೂ ಉಚ್ಚಾಟನೆ ಮಾಡಬೇಕಾಗಿದ್ದು, S.T.ಸೋಮಶೇಖರ್, ರೇಣುಚಾರ್ಯ, ಹೆಬ್ಬಾರ, ವಿಜೇಯೇಂದ್ರ ಇಂತವರನ್ನ ಉಚ್ಚಾಟಿಸಬೇಕಿತ್ತು. ಬಿಜೆಪಿ ಹೈಕಮಾಂಡಿಗೆ ಆ ಧಮ್ ಇಲ್ಲ. ಏಕೆಂದರೆ ಇವರ ಸೂಟ್ಕೇಸ್ ಮುಂದೆ ಮಂಡಿಯೂರಿದೆ.
ನಿಜವಾದ ಜನ ನಾಯಕರು ಯತ್ನಾಳ್, ಈಶ್ವರಪ್ಪ, ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಇವರೆಲ್ಲ ಇದ್ದಿದ್ದನ್ನ ಇದ್ದಂಗೇ ಹೇಳೋರು.
ಇಂತವರನ್ನ ನಿಮ್ಮ ಸ್ವಾರ್ಥಕ್ಕಾಗಿ ಮೂಲೆ ಗುಂಪು ಮಾಡಿದ ಬಿಜೆಪಿಗೆ ನಮ್ಮ ಧಿಕ್ಕಾರವಿದೆ. ಮುಂದೆಯೂ ಕೂಡ ಬಿಜೆಪಿಗೆ ನಾನು ವೋಟ್ ಮಾಡೋದು ಇಲ್ಲ.
#i_hate_bjp #i_heat_bjp_highcommand ಎಂದು ಅಭಿಯಾನ ಶುರು ಮಾಡಿದ್ದಾರೆ.
ಮತ್ತೆ ಕೆಲವರ ಆಕ್ರೋಶದ ಕಾಮೆಂಟ್ ಈ ರೀತಿಯಲ್ಲಿದೆ.
ಒಬ್ಬ ನಾಯಕ ಈ ಚಮಚಾಗಿರಿ ರಾಜಕಾರಣದಿಂದ ಬೇಸೆತ್ತು ಮೌನವಾಗಿ ದೂರ ಸರಿದರು.
ಮತ್ತೊಂದು ಗೆಲ್ಲುವ ಕುದುರೆಯನ್ನ ಕಟ್ಟಿಹಾಕಿದರು, ಬೇಕಂತಲೇ ಟಿಕೆಟ್ ತಪ್ಪಿಸಿದರು. ಯಾವುದಾದರೊಂದು ಹುದ್ದೆ ಅಲಂಕರಿಸುವ ಅವಕಾಶವಿದ್ದರೂ ಅದಕ್ಕೂ ಕಲ್ಲು ಹಾಕಿದರು. ಇಷ್ಟಾದರೂ ಎಲ್ಲಾ ಅವಮಾನಗಳು ಸಹಿಸಿಕೊಂಡು ಬಿಜೆಪಿಗೆ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ನಿರಂತರ ಶ್ರಮವಹಿಸಿಕೊಂಡು ಹೋಗುತ್ತಿದ್ದಾರೆ ಈ ವ್ಯಕ್ತಿ. ಯಾರೂ ಕೂಡ ತಮ್ಮನ್ನು ಮೀರಿ ಬೆಳೆಯಬಾರದು.
ಅಸಲಿಗೆ ರಾಜ್ಯ ಬಿಜೆಪಿ ನಾಯಕರಿಗೆ ಇವರಿಬ್ಬರ ನಾಯಕರ ಹಿಂದೆ ಅದೆಷ್ಟು ಯುವಕರು ಇವ್ರ ಬೆನ್ನಿಗೆ ನಿಂತಿದ್ದಾರೆನ್ನೋ ಸಣ್ಣ ಅಂದಾಜು ಕೂಡ ಇಲ್ಲ. ಮುಂದೆ ಬಿಜೆಪಿ ಪಕ್ಷ ಶಾಶ್ವತವಾಗಿ ನಶಿಸಿ ಹೋಗುವ ಹೋಗುವ ದಿನಗಳು ದೂರವಿಲ್ಲ ಅದು ಕೂಡ ಆದಷ್ಟು ಬೇಗ ನಡೆದು ಹೋಗಲಿ.
ಕರ್ನಾಟಕದಲ್ಲಿ ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಬಹುತೇಕ ಬಿಜೆಪಿ ಹಳ್ಳ ಹಿಡಿಯುತ್ತಿದೆ ಹೈ ಕಮಾಂಡ್ ಧೃತರಾಷ್ಟ್ರ ನಂತೆ ವರ್ತಿಸಿದೆ. ದೇಶದಲ್ಲಿ ಬಿಜೆಪಿ ಉಳಿಯೋದಕ್ಕ ಕುಟುಂಬ ರಾಜಕಾರಣ ಬೇಕಿಲ್ಲ.
ಇದು ಸತ್ಯವಂತರಿಗೆ ಕಾಲ ಅಲ್ಲಾ ಬಿಜೆಪಿ ಮತ್ತಷ್ಟ್ಟು ಅವನತಿಗೆ ಹೋಗುತ್ತದೆ.
ಅಂತಹ ಬಿಜೆಪಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದ ಅಡ್ವಾಣಿಜೀಯವರನ್ನೇ ಮೂಲೆಗೆ ಹಾಕಿರುವುದಾಗಿ ಇವರನ್ನು ಬಿಡುತ್ತಾರೆಯೇ.
ಬಿಜೆಪಿ ಯಲ್ಲಿಯೂ ಗುಲಾಮಗಿರಿ ಮಾಡಿಕೊಂಡು ಇರುವವರಿಗೆ ಮಾತ್ರ ಉಳಿಗಾಲ ಅಂತ ಕಾಣುತ್ತೆ.
ಒಟ್ಟಿನಲ್ಲಿ ಎರಡು ರಾಷ್ಟೀಯ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳು ಇದ್ದಹಾಗೆ ಇವೆ.
ಹಿಂದೂ ಪರ ಧ್ವನಿ ಎತ್ತಿದವರಿಗೆ ಎರಡು ಪಕ್ಷದಲ್ಲಿ ಉಳಿಗಾಲ ಇಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ಅವರೇ ನಾವು ನಿಮ್ಮ ಕ್ಷೇತ್ರದವನು ಅಲ್ಲದಿದ್ದರೂ ಕೂಡ ಹಿಂದೂಗಳು ನಿಮ್ಮೊಂದಿಗೆ ಇದ್ದೇವೆ.ಸದಾ ನಿಮ್ಮೊಂದಿಗೆ ಇರುತ್ತೇವೆ.
ಬಿಜೆಪಿಯ ನಡೆ ಖಂಡನೀಯ.
ಬುದ್ಧಿ ಕಲಿತು ಜನ ಬಿಜೆಪಿಗೆ ಓಟು ಹಾಕಬಾರದು…….ಆವಾಗ ಉಚ್ಛಾಟನೆ ಮಾಡಿದವರೇ ಶರಣು ಅಂತ ವಾಪಾಸು ಕರ್ಕೊಂತಾರೆ.
ಬುದ್ಧಿ ಕಲಿತು ಶರಣು ಅಂತ ಬರಲಿ. ವಾಪಸ್ ಕರ್ಕೊಂತಾರೆ.
ಯಾವುದೋ ಒಂದು ಕುಟುಂಬವನ್ನ ಉಳಿಸಲು ನಿಷ್ಠಾವಂತ ಒಬ್ಬ ನಾಯಕನನ್ನ ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದಾರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಇನ್ನೂ ಅಧೋಗತಿಗೆ ಇಳಿಯಲಿದೆ.
ಇದು ಸತ್ಯವಂತರಿಗೆ ಕಾಲ ಅಲ್ಲಾ ಬಿಜೆಪಿ ಮತ್ತಷ್ಟ್ಟು ಅವನತಿಗೆ ಹೋಗುತ್ತದೆ ಎಂಬಂತೆ ಅನೇಕ ಅಭಿಪ್ರಾಯ ಕಂಡುಬಂದಿದೆ.