ದೊಡ್ಡಬಳ್ಳಾಪುರ (Doddaballapura): ನಗರ ಪೊಲೀಸ್ ಠಾಣೆ ಆವರಣದಲ್ಲಿ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಬೆಳ್ಳಂಬೆಳಗ್ಗೆ ರೌಡಿಗಳ ಪರೇಡ್ ನಡೆಸಿ, ಮುಂದೆ ಅಪರಾಧ ಕೃತ್ಯಗಳನ್ನು ಮಾಡಿದರೆ ಹುಷಾರ್ ಎಂಬ ಎಚ್ಚರಿಕೆ ನೀಡಿದ್ದಾರೆ.
ಕೊಲೆ, ಗಲಭೆ, ಕಳ್ಳತನ, ದರೋಡೆ ಮಾಡಿದ ಮತ್ತಿತರರ ಸುಮಾರು 22 ಮಂದಿ ರೌಡಿಗಳನ್ನು ವಿಚಾರಣೆ ನಡೆಸಿದ ಅಮರೇಶ್ ಗೌಡ, ಅಪರಾಧ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾರು 10 ವರ್ಷಗಳ ಕಾಲ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೆ, ಸನ್ನಡತೆಯಲ್ಲಿ ಇದ್ದರೆ, ಅಂತವರ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೌಡಿ ಪಟ್ಟಿ ತೆರವು ಮಾಡುವ ಭರವಸೆ ನೀಡಿದರು. ಅಲ್ಲದೆ ಬಾಲ ಬಿಚ್ಚಿದಲ್ಲಿ ಮತ್ತೆ 10 ವರ್ಷ ರೌಡಿ ಪಟ್ಟಿಯಲ್ಲೇ ಮುಂದುವರಿಸುವುದಾಗಿ ವಾರ್ನಿಂಗ್ ಕೂಡ ನೀಡಿದರು
ಈ ವೇಳೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಿಬ್ಬಂದಿಗಳಾದ ಪಾಂಡುರಂಗ, ಶಿವಾನಂದ ಮತ್ತಿತರರಿದ್ದರು.