ಗುರುವಾರ, ಮಾ.27, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು. (ಭಕ್ತಿಯಿಂದ ಶ್ರೀ ಕಾಲ ಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ದೀರ್ಘಕಾಲದ ಸಮಸ್ಯಗಳಿಗೆ ಪರಿಹಾರ ದೊರೆಯುವುದು. ಕೋರ್ಟನಲ್ಲಿ ಇರುವ ನ್ಯಾಯ ಬಗೆಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಉದ್ಯೋಗ ದ ಬಗ್ಗೆ ಆತ್ಮಸಂತೃಪ್ತಿ ಮೂಡುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವುದು. (ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ಸ್ವಪ್ರಯತ್ನ ದಿಂದಲೇ ಎಲ್ಲವೂ ಸಾಧ್ಯವಾಗುವುದು. ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಾಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇರಲಿ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ನಿಮ್ಮ ಭವಿಷ್ಯ ವನ್ನು ಸಮೃದ್ಧಗೊಳಿಸಲು ನೀವು ಹಿಂದೆ ಹೂಡಿಕೆ ಮಾಡಿದ ಎಲ್ಲಾ ಹಣವು ಇಂದು ಫಲಪ್ರದ ಫಲಿತಾಂಶಗಳನ್ನು ನೀಡುವ ಯೋಗವಿದೆ. ನಿಮ್ಮ ಕಾರ್ಯ ಪ್ರವೃತ್ತಿಯ ಸಾಧನೆಯ ಮೂಲಕ ವಿಶೇಷ ವ್ಯಕ್ತಿಯನ್ನು ಸೆಳೆಯುತ್ತೀರಿ. (ಭಕ್ತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯ ಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. (ಭಕ್ತಿಯಿಂದ ಶ್ರೀ ಕೇದಾರನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ನಿಮ್ಮ ಇಷ್ಟಾರ್ಥಗಳು ಈಡೇರಬಹುದು. ವ್ಯಾಪಾರದ ಸಂದರ್ಭದಲ್ಲಿ ಮಹತ್ವಾ ಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸಬಹುದು. ವ್ಯಾಪಾರಿಗಳು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಬೆಳೆಯುತ್ತದೆ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಹಣಕಾಸಿನ ವಿಷಯದಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಸಾಧ್ಯವಾದಷ್ಟು ಹೆಚ್ಚಿನ ಗಮನವನ್ನು ನೀಡಿ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ಧನಸ್ಸು ರಾಶಿ: ಇಂದು ವಿವಾದಾತ್ಮಕ ವಿಷಯಗಳನ್ನು ಎತ್ತುವುದನ್ನು ತಪ್ಪಿಸಿ. ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರುತ್ತದೆ. ಸೆಮಿನಾರ್‌ಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. (ಭಕ್ತಿಯಿಂದ ಶ್ರೀ ಅರ್ಧ ನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆ ಯಾಗುವವು. ಔದ್ಯೋಗಿಕ ಪ್ರವಾಸ ಯೋಗವಿದೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ನಿರೀಕ್ಷಿತ ಸರ್ವಕಾರ್ಯಗಳು ನೆರವೇರುತ್ತದೆ. ಆರ್ಥಿಕ ಮಟ್ಟವೂ ಏರಿಕೆಯಾಗಲಿದ್ದು, ಸ್ಥಿರಪ್ರಾಪ್ತಿ ಯೋಗವಿದೆ, ಸಂಸಾರ ಸುಖ, ಸಂಭ್ರಮ ವಾತಾವರಣ ಮೂಡಲಿದೆ. ಶುಭ ಕಾರ್ಯ ಪ್ರಯತ್ನ ಫಲಕೊಡುವ ಯೋಗವಿದೆ. (ಭಕ್ತಿಯಿಂದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಜೀವನ ಮುಂದಿನ ಹಾದಿಯ ಸ್ಪಷ್ಟ ಚಿತ್ರಣಗಳು ನಿಮಗೆ ತಿಳಿದಿದೆ. ನಿಮ್ಮ ಹಾದಿಯಲ್ಲಿ ಇತರರು ಬರದಂತೆ ನೋಡಿ ಕೊಳ್ಳಿ. ಗೊಂದಲಕ್ಕೊಳಗಾಗದಿರಿ.ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM