ಲಕ್ನೋ: ಕನ್ನಡಿಗರಾಗಲೀ ಅಥವಾ ತಮಿಳುನಾಡಿನ ಜನರಾಗಲಿ ಹಿಂದಿ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಉತ್ತರಪ್ರದೇಶದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi adityanatha) ಪ್ರಶ್ನಿಸಿದ್ದಾರೆ.
ಬುಧವಾರ ರಾಷ್ಟ್ರೀಯ ಸುದ್ದಿವಾಹಿನಿ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾಷೆಯ ವಿಷಯವು ರಾಜಕೀಯ ಸಂಗತಿಯಾಗಬಾರದು ಭಾಷೆ ಹೆಸರಲ್ಲಿ ವಿಭಜಿಸಬಾರದು ಎಂದಿದ್ದಾರೆ.
ತ್ರಿಭಾಷಾ ನೀತಿಯ ಬಗ್ಗೆ ಮಾತನಾಡುತ್ತಾ ಅವರು, ಭಾಷೆಯ ಯಾವುತ್ತೂ ಜನರನ್ನು ಒಡೆಯುವುದಿಲ್ಲ. ಬದಲಾಗಿ ಅವರನ್ನು ಒಂದು ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ತಮಿಳು ಸಂಸ್ಕೃತದ ಸಮಾಗಮ ನಡೆಸಿ ಕಾರ್ಯಕ್ರಮ ನಡೆಸಿದ್ದಾರೆ.
ತ್ರಿಭಾಷಾ ಶಿಕ್ಷಣ ನೀತಿಯ ಬಗ್ಗೆ ದಕ್ಷಿಣದ ರಾಜ್ಯಗಳು ಅಪಸ್ವರ ಎತ್ತಿದ್ದವು. ಮಾತೃಭಾಷೆ ಶಿಕ್ಷಣವೇ ಅತ್ಯುತ್ತಮ ಶಿಕ್ಷಣ ಎಂದು ಈಗಾಗಲೇ ಸಾಬೀತಾಗಿದೆ ಆದರೂ ಕೇಂದ್ರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಹಿಂದಿ ಭಾಷೆಯ ಅನಿವಾರ್ಯತೆ ಇಲ್ಲದಿದ್ದರೂ ಜನರಿಗೆ ಹಿಂದಿ ಕಲಿಸಿ ಸ್ಥಳೀಯ ಭಾಷೆಗಳನ್ನು ಕೇಂದ್ರ ನಿರ್ನಾಮ ಮಾಡುತ್ತಿದೆ ಎಂದು ಕಿಡಿ ಕಾರಿದ್ದರು.
ಕೇಂದ್ರ ಸರ್ಕಾರದ ತೆರಿಗೆ ಪಾಲು ವಿತರಣೆಯಲ್ಲಿ ತಾರತಮ್ಯ, ಹಿಂದಿ ಹೇರಿಕೆ, ಕ್ಷೇತ್ರ ಮರು ವಿಂಗಡಣೆ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi adityanatha) ಅವರ ಮಾತು ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ತಮಿಳು ನಾಡಿನ ಸಚಿವರೊಬ್ಬರು ಹಿಂದಿ ಕಲಿತವರಿಗೆ ಕೆಲಸ ಸಿಗುವ ಹಾಗಿದ್ದರೆ ಉತ್ತರ ಭಾರತೀಯರು ಇಲ್ಲಿ ಬಂದು ಪಾನಿಪುರಿ ಮಾರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.