ನವದೆಹಲಿ: ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ (Honey trap) ವಿಚಾರ ದೇಶದಲ್ಲಿ ಸದ್ದು ಮತ್ತು ಸುದ್ದಿ ಮಾಡಿಸಲು ಬಹಳಷ್ಟು ಪ್ರಯತ್ನಗಳು ನಡೆದಿದೆ ಎಂಬ ಮಾತು ವ್ಯಾಪಕ ಚರ್ಚೆಯಲ್ಲಿದೆ.
ಇದರ ಬೆನ್ನಲ್ಲೇ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ರಾಜಕಾರಣಿಗಳು ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಮನವಿ ಮಾಡಿ ಜಾರ್ಖಂಡ್ ರಾಜ್ಯದ ವಕೀಲ ವಿನಯ್ ಕುಮಾರ್ ಸಿಂಗ್ ಎಂಬುವವರು ಸುಪ್ರೀಂಕೋರ್ಟ್ ಪಿಐಎಲ್ ಸಲ್ಲಿಕೆ ಮಾಡಿದ್ದರು.
ಈ ಪಿಐಎಲ್ ವಜಾಗೊಳಿಸಿರುವ ಸುಪ್ರೀಂಕೋರ್ಟ್, ನೀವು ಜಾರ್ಖಂಡ್ ರಾಜ್ಯದವರು ನಿಮಗೇನು ಸಂಬಂಧ. ಜಡ್ಜ್‌ಗಳು ಯಾಕೆ ಹನಿಟ್ರ್ಯಾಪ್‌ಗೆ ಒಳಗಾಗುತ್ತಾರೆ. ಅದನ್ನ ಜಡ್ಜ್‌ಗಳು ನೋಡಿಕೊಳ್ಳುತ್ತಾರೆ.
ನಿಮ್ಮ ರಾಜಕೀಯ ನಾನ್‌ಸೆನ್ಸ್‌ಗಳನ್ನೆಲ್ಲಾ ನಾವು ವಿಚಾರಣೆ ಮಾಡಲ್ಲ ಎಂದು ತರಾಟೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.