Daily story: ಶಿಕ್ಷಕನು ಇತರರಿಗೆ ಜ್ಞಾನ, ಸಾಮರ್ಥ್ಯಗಳು ಅಥವಾ ಮೌಲ್ಯಗಳನ್ನು ಪಡೆಯಲು ನೆರವು ನೀಡುವ ವ್ಯಕ್ತಿ.
ಗುರು ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ.
ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ.
ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ.
ತಂದೆ-ತಾಯಂದಿರು, ಶಿಕ್ಷಕರು, ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ.
ಧಾರ್ಮಿಕ ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನಿತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ.
ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ.
ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು “ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ.
ಸಂಸ್ಕೃತದಲ್ಲಿ “ಗುರು” ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ.
[clarification needed] ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, “ಗುರು” ಎಂಬ ಶಬ್ದವು ವ್ಯಾಪಕವಾಗಿ “ಶಿಕ್ಷಕ” ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.
ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ, ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ.
ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.
ಕೃಪೆ: ಸಾಮಾಜಿಕತಾಣ