ಬೆಂಗಳೂರು: ಮುಸ್ಲಿಂ ಸಮುದಾಯದ ಕುರಿತು ಸದಾ ಅಸಹಿಷ್ಣತೆಯ ಮಾತುಗಳನ್ನಾಡುವ, ಕಠೋರ ಹಿಂದುತ್ವ ಸಾರುವ ಬಿಜೆಪಿ (BJP) ಬೆಂಬಲಿಗರಿಗೆ ಕಹಿ ಸುದ್ದಿಯೊಂದನ್ನು ವರಿಷ್ಠರು ನೀಡಿದ್ದಾರೆ.
ಹೌದು ರಂಜಾನ್ ಹಬ್ಬದ ಹಿನ್ನಲೆಯಲ್ಲಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸ್ರಲ್ಲಿ ಈದ್ ಕಿಟ್ ಅನ್ನು ಬಿಜೆಪಿ ನೀಡುತ್ತಿದೆ.
ಇದು ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದ್ದು, ಇದನ್ನೆ ಇತರೆ ಪಕ್ಷಗಳು ಮಾಡಿದರೆ ಓಲೈಕೆ ರಾಜಕಾರಣ ಮಾಡುತ್ತಿವೆ ಎಂದು ಬೊಂಬಡ ಬಜಾಯಿಸುವ ಬಿಜೆಪಿ ಅಧಿಕಾರದ ಲಾಭಕ್ಕೆ ಯಾವ ಕೆಲಸವನ್ನಾದರು ಮಾಡುತ್ತದೆ ಎಂದು ಲೇವಡಿ ಮಾಡುತ್ತಿವೆ.
ಏಕೆಂದರೆ ಇತ್ತೀಚೆಗೆ ಕರ್ನಾಟಕದಲ್ಲಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ತಂದಿದ್ದನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿ, ಮುಸ್ಲಿಂ ಪರ, ಕಾಂಗ್ರೆಸ್ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿತ್ತು. ಆದರೆ ಕಿಟ್ ವಿತರಣೆ ಬಿಜೆಪಿ ಮುಖಂಡರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ದಿನೇಶ್ ಗುಂಡೂರಾವ್ ಲೇವಡಿ.
ಇನ್ನೂ ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಟ್ವಿಟ್ ಮೂಲಕ ಲೇವಡಿ ಮಾಡಿದ್ದು, ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ನವರು ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು.? ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದಿದ್ದಾರೆ.
ಕಾಂಗ್ರೆಸ್‌ನವರು ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು.
ಆದರೆ ಈಗ ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೆ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ.? ಎಂದು ಚಾಟಿಬೀಸಿದ್ದಾರೆ.