ದೊಡ್ಡಬಳ್ಳಾಪುರ: ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಆಫ್ ಲಾ ವಿದ್ಯಾಲಯದ ವತಿಯಿಂದ ತಾಲೂಕಿನ ಕಾಡತಿಪ್ಪೂರು (Kadathipur) ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರವಿ ಬೇಟೆಗಾರ್ ಭಾಗವಹಿಸಿದ್ದರು.
ಈ ವೇಳೆ ಗ್ರಾಮಸ್ಥರು ವಿವಿಧ ಕುಂದು ಕೊರತೆಗಳನ್ನು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇವುಗಳಲ್ಲಿ ಪ್ರಮುಖವಾಗಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ಎಮ್ಎಸ್‌ಜಿಪಿ (MSGP)ಯಲ್ಲಿ ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡಲಾಗುತ್ತಿದ್ದು, ಆದ್ದರಿಂದ ಇಲ್ಲಿನ 20 ಕಿಲೋಮೀಟರ್ ಸುತ್ತಾಳೆತೆಯ ಗ್ರಾಮಗಳಲ್ಲಿ ಅನೇಕ ವಿಧವಾದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ರೋಗಗಳು ಹರಡಿದೆ ಎಂದು ಅಳಲು ತೋಡಿಕೊಂಡರು
ಅಲ್ಲದೆ ಬಿಬಿಎಂಪಿ ಕಸದಿಂದ ಬರುವ ತ್ಯಾಜ್ಯ ನೀರಿನಿಂದ ಅಂತರ್ಜಲ ಕಲುಷಿತವಾಗಿ ಮತ್ತು ಜೀವ ಹಾನಿಕಾರಕ ಕ್ರಿಮಿಕೀಟಗಳು ಉತ್ಪಾದನೆಯಾಗಿದೆ. ಇಲ್ಲಿ ಬೀಸುವ ಗಾಳಿ ಬಹು ಕಲುಷಿತವಾಗಿ ಉಸಿರಾಟದ ಸಮಸ್ಯೆ ಗಳನ್ನು ಹರಡಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಈ ಘಟಕದ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಆಫ್ ಲಾ ವಿದ್ಯಾಲಯದ ಕಾನೂನು ಸೇವಾ ಸಮಿತಿಯ ಅಧ್ಯಾಪಕ ಸಂಚಾರಿ ಸಂಚಾಲಕ ಪ್ರಿಯಾಂಕ್ ಜಾಗವಂಶಿ, ವಿದ್ಯಾರ್ಥಿ ಸಂಚಾಲಕ ಸುದರ್ಶನ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೃಷ್ಣಮೂರ್ತಿ, ಗಂಗ ಹನುಮಯ್ಯ, ಮಾಜಿ ಅಧ್ಯಕ್ಷ ಸಿದ್ದಲಿಂಗಪ್ಪ, ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರಾದ ಮಧುಸೂದನ್, ಕಾಡುತಿಪೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚೌಧರಿ ಮತ್ತಿತರರಿದ್ದರು.