ಬೆಂಗಳೂರು: ವಿಶ್ವಜಲದಿನದ ಅಂಗವಾಗಿ ಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆದ ‘ಕಾವೇರಿ ಆರತಿ’ಗೆ (Kaveri) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಚಿವ ರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂ ರಾವ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಾವೇರಿ ಆರತಿ ನಡೆಯಿತು.
ನೀರಿನ ಜಾಗೃತಿ ಮೂಡಿಸುವ ಹಾಗೂ ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಆಯೋಜಿಸಿದ್ದ ಕಾವೇರಿ ಆರತಿ ಅದ್ದೂರಿಯಾಗಿ ನೆರವೇರಿತು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಭಾಗ ಮಂಡಲದಿಂದ ತಂದ ಕಾವೇರಿ ಜಲಕ್ಕೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು.
ಈ ವೇಳೆ ಗಂಗಾದೇವಿಗೆ ಹೋಮ ಸಲ್ಲಿಸಲಾಯಿತು. ಬಳಿಕ 108 ಕಲಶಗಳೊಂದಿಗೆ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ತರಲಾಯಿತು.

ಕಾವೇರಿ ಮಾತೆಗೆ ಡಿಸಿಎಂ ಡಿ.ಕೆ ಶಿವ ಕುಮಾರ್ ವಿಶೇಷ ಪೂಜೆ ನೆರವೇರಿಸಿದರು. ಸ್ಯಾಂಕಿ ಕೆರೆಯ ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ದ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿತು.
ಗಾಯಕಿ ಅನನ್ಯಾ ಭಟ್, ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದರೆ, 3ಡಿ ಮ್ಯಾಪಿಂಗ್ ಮಾದರಿಯಲ್ಲಿ ವಿದ್ಯುತ್ ಅಲಂಕಾರವಿತ್ತು.
ಡಿ.ಕೆ. ಶಿವಕುಮಾರ್ ಮಾತನಾಡಿ, ನೀರಿಲ್ಲದೇ ನಾವಿಲ್ಲ. ನೀರೇ ನಾಗರಿಕತೆ- ನೀರಿಂದಲೇ ಧರ್ಮ. ಬರಗಾಲ ಬಂದಾಗ, ಬಾವಿ ಒಣಗಿದಾಗ ನೀರಿನ ಮಹತ್ವ ನಮಗೆ ತಿಳಿಯುತ್ತದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಾರದೆಂದು ಪ್ರಾರ್ಥನೆ ಮಾಡಲು, ದೇಶದ ಇತಿಹಾಸ- ಸಂಸ್ಕೃತಿ ಉಳಿಸಲು ಈ “ಕಾವೇರಿ ಆರತಿ” ಮಾಡಿದ್ದೇವೆ.

ಕೆಆರ್‌ಎಸ್‌ನಲ್ಲಿ ದಸರಾ ವೇಳೆಗೆ “ಕಾವೇರಿ ಆರತಿ” ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೊಂದು ಸಮಿತಿ ರಚಿಸಿದ್ದೇವೆ.
ಜಲಮಾತೆಗೆ ನಮನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾಕೆಂದರೆ, “ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ.”
ಐತಿಹ್ಯವಿರುವ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಮಾತೆಗೆ ಆರತಿ ಬೆಳಗಿ, ಅಲ್ಲಿ ನೆರೆದಿದ್ದವರೊಂದಿಗೆ ಜಲಸಂರಕ್ಷಣೆಯ ಸಂಕಲ್ಪ ಕೈಗೊಂಡೆ. ಸಾರ್ವಜನಿಕರೆಲ್ಲರೂ ಈ ಪ್ರತಿಜ್ಞೆ ಸ್ವೀಕರಿಸಿ, ನೀರಿನ ಸಂರಕ್ಷಣೆಯ ಪಣ ತೊಡಿ.
ಇಂದು ಕಾವೇರಿ ಆರತಿ, ಅದು ಅನುದಿನವೂ ಜಲಜಾಗೃತಿಯಾಗಲಿ ಎಂದರು.