ದೊಡ್ಡಬಳ್ಳಾಪುರ (Doddaballapura): ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ ಕರ್ನಾಟಕ, ರಾಜ್ಯ, ಕನ್ನಡ ಜಾಗೃತಿ ವೇದಿಕೆ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಪ್ರಜಾ ವಿಮೋಚನಾ ಬಹುಜನ ಸಮಿತಿ, ನೋಂದವರ ಬಂಧು ಸೇವಾ ಸಂಸ್ಥೆ ನೇತೃತ್ವದಲ್ಲಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಪ್ರತಿಭಟನಾಕಾರರು ಎಂಇಎಸ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಕೃತಿ ದಹನ ಮಾಡಿಣ ಧಿಕ್ಕಾರ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜ್ ಎಂ., ಇವತ್ತಿನ ಪ್ರತಿಭಟನೆ ಕರ್ನಾಟಕ ಬಂದ್ ಮುಖ್ಯ ಉದ್ದೇಶ ಎಂಇಎಸ್ ನಿಷೇಧಿಸಬೇಕು, ಶಿವಸೇನೆ ನಿಷೇಧಿಸಬೇಕು, ಮೇಕೆದಾಟು ಯೋಜನೆ ಜಾರಿ ಆಗಲೇಬೇಕು. ಮತ್ತು ಮಹದಾಯಿ ಯೋಜನೆ ಜಾರಿಯಾಗಿಲೇಬೇಕು ಎಂಬುದಾಗಿದೆ.
ಈಗಾಗಲೇ MES / ಶಿವಸೇನೆ ಪುಂಡರು ನಮ್ಮ ರಾಜ್ಯದ ಬಸ್ ಕಂಡಕ್ಟರ್ ಹಲ್ಲೆ ಆಗಿರುವುದು ಮತ್ತು ಪಿಡಿಒ ಮೇಲೆ ನಡೆದ ದೌರ್ಜನ್ಯ ಮರಾಠಿಗರ ಹಟ್ಟಹಾಸ ಹೆಚ್ಚಾಗಿದೆ.
ಇಲ್ಲಿನ ನೀರು, ಅನ್ನ, ಉದ್ಯೋಗ ಪಡೆದು ಕನ್ನಡಿಗರಿಗೆ ಹಲ್ಲೆ ಮಾಡುವುದು ಮತ್ತೆ ಕನ್ನಡ ಬಾವುಟ ಸುಡುವುದು, ಕರಾಳ ದಿನವನ್ನು ಆಚರಿಸುವುದು ಅವರ ವಾಡಿಕೆ ಆಗಿದೆ. ಅಲ್ಲದೆ ಮಹಾಜನ್ ವರದಿ ಅಂತಿಮ, ಕೋರ್ಟಿನಲ್ಲಿ ಇದ್ದರೂ ಸಹ ಪದೇ ಪದೇ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಹಾಗುವ ಹೇಳಿಕೆಗಳನ್ನು ನೀಡುವುದು ಹಾಗೂ ದಶಕಗಳಿಂದ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ಅಭ್ಯಾಸವಾಗಿದೆ.
ಈ ಕೂಡಲೇ ಕರ್ನಾಟಕ ಸರ್ಕಾರ ಇವರ ಮೇಲೆ ಕಠಿಣವಾದ ಕಾನೂನಿನ ಕ್ರಮ ಜರುಗಿಸಬೇಕು.. MES / ಶಿವಸೇನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಪ್ರಜಾ ವಿಮೋಚನ ಬಹುಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನ್ನಿಗರಾಯಪ್ಪ, ಎಂಇಎಸ್ ಪುಂಡರು ಪದೇ ಪದೇ ಕನ್ನಡಿಗರ ಮೇಲೆ ಮಸಿ ಬಳಿಯುವುದು. ಅಮಾಯಕ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾ ಮುಖಂಡ ಅಗ್ನಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್, ಜಿಲ್ಲಾ ಸಂಚಾಲಕ ರಜತ್, ಮಂಜುನಾಥ್, ತಾಲೂಕ ಅಧ್ಯಕ್ಷ ಶಶಿಧರ್ ಸಿ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಮಹಿಳಾ ಅಧ್ಯಕ್ಷ ಮುನಿರತ್ನಮ್ಮ, ಸಂಘಟನಾ ಕಾರ್ಯದರ್ಶಿ ಗೌರಮ್ಮ, ತಾಲೂಕು ಗೌರವಾಧ್ಯಕ್ಷ ಶಿವಲಿಂಗಯ್ಯ ತಾಲೂಕು ಸಂಚಾಲಕ ಮಹದೇವ್, ಶಿವಪ್ರಸಾದ್, ಹರೀಶ್, ರಾಜಶೇಖರ್, ಶಿವಕುಮಾರ್, ವೆಂಕಟೇಶ್.
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಸಂಘದ ಶಿವಾನಂದ್, ನಂಜುಂಡೇಶ್ವರ, ವಡ್ಡ ಹಳ್ಳಿ ಮಂಜುನಾಥ್, ಡಿಕೆ ಉಮೇಶ್, ವೈರ್ ಶಿವು, ಸುಬ್ರಮಣ್ಯ.
ನೊಂದವರ ಬಂದು ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ಗೌರಮ್ಮ, ನಂದಿನಿ, ಲಕ್ಷ್ಮಿ, ಕುಸುಮ.
ಪ್ರಜಾ ವಿಮೋಚನಾ ಬಹುಜನ ಸಮಿತಿಯ ಶ್ರೀನಿವಾಸ್, ಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.