ಬೆಂಗಳೂರು: ಸದನಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಸಭಾಧ್ಯಕ್ಷರು ನೀಡುವ ಸೂಚನೆಗಳನ್ನು ಪಾಲನೆಮಾಡಬೇಕು ಎಂದು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ.
ಗದ್ದಲ ಕೋಲಾಹಲಕ್ಕೆ ಕಾರಣವಾಗಿ ಸದನದ ಗೌರವಕ್ಕೆ ಧಕ್ಕೆ ತಂದಂತ ಆರೋಪದ ಅಡಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಸೇರಿ ಬಿಜೆಪಿಯ 18 ಶಾಸಕರನ್ನು ಸದನದಿಂದ ಆರು ತಿಂಗಳ ಕಾಲ ಅಮಾನತುಗೊಳಿಸಿ ಸಭಾಧ್ಯಕ್ಷ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆಹೆಚ್ ಮುನಿಯಪ್ಪ, ಸದನದಲ್ಲಿ ವಿರೋಧ ಪಕ್ಷದ ಶಾಸಕರು ಸ್ವಾಭಾವಿಕವಾಗಿ ವಿರೋಧ ವ್ಯಕ್ತ ಪಡಿಸುವುದು ಸಹಜ ಆದರೆ ವಿರೋಧ ಪಕ್ಷದ ಸದಸ್ಯರು
ಸದನದಲ್ಲಿ ಮುಖ್ಯಮಂತ್ರಿಗಳ ಉತ್ತರಕ್ಕೂ ಲೆಕ್ಕಿಸದೆ ಸದನದಲ್ಲಿ ಅತಿರೇಕವಾಗಿ ವರ್ತಿಸಿದ ಕಾರಣ ಹಾಗೂ ಸಭಾಧ್ಯಕ್ಷರು ಬಿಲ್ ಗಳ ಮಂಡನೆ ಮಾಡುವ ಸಂದರ್ಭದಲ್ಲಿ ಕಾಗದ ಪತ್ರಗಳನ್ನು ಅವರ ಮೇಲೆ ಎಸೆಯುವುದು ಸರಿಯಲ್ಲಾ
ಶಾಸಕರು ಅವರ ಸಮಸ್ಯೆಗಳಿಗೆ ಪರಿಹಾರವನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಬೇಕು ಅದನ್ನು ಬಿಟ್ಟು ಅವರೇ ಈ ರೀತಿಯಾಗಿ ವರ್ತಿಸಿದರೆ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಹೇಳಿ ಎಂದು ಪ್ರಶ್ನಿಸಿದರು.
ಸದನದಲ್ಲಿ ಚರ್ಚೆಗಳು ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಶಾಸಕರ ವರ್ತನೆ ಸರಿಯಿಲ್ಲದ ಕಾರಣ ಸಭಾಧ್ಯಕ್ಷರು ಕೆಲವು ಶಾಸಕರನ್ನು ಅಮಾನತು ತೆಗೆದುಕೊಂಡು ತೀರ್ಮಾಣ ಸರಿಯಾಗಿದೆ.
ಸದನದ ಗೌರವ ಕಾಪಾಡುವುದು ಎಲ್ಲಾ ಶಾಸಕರ ಕರ್ತವ್ಯ ಎಂದರು.