ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿಗಳನ್ನ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಂಡ್ಯದ ಮಿಮ್ಸ್ ಆಸ್ಪತ್ತ್ರೆಗೆ ಭೇಟಿ ಪೋಷಕರನ್ನ ಭೇಟಿ ಮಾಡಿ ಮಕ್ಕಳ ಅರೋಗ್ಯ ವಿಚಾರಿಸಿ ವೈದ್ಯರಿಂದ ಘಟನೆಯ ಸಂಕ್ಷಿಪ್ತ ಮಾಹಿತಿ ಪಡೆದರು.
ನಂತರ ಮಾಧ್ಯಮಗಳ ಜತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಘಟನೆಯಲ್ಲಿ ಫುಡ್ ಪಾಯಿಸನ್ ನಿಂದ 45 ಮಕ್ಕಳು ಅಸ್ವಸ್ಥಗೊಂಡು ಚಿಕಿತ್ಸೆ ಪಡಿತ್ತಿದ್ದಾರೆ. ಅದರಲ್ಲಿ ಹತ್ತಾರು ಮಕ್ಕಳು SSLC ವಿದ್ಯಾರ್ಥಿಗಳು.
ಇಬ್ಬರನ್ನ ಉಳಿಸಿಕೊಳ್ಳಲು ಆಗಲಿಲ್ಲ ಅಂತಾ ವೈದ್ಯರು ಹೇಳಿದ್ದಾರೆ.ಇಂದು ಭೇಟಿ ನೀಡಿ ವೈದ್ಯರು, ಪೋಷಕರನ್ನ ಭೇಟಿ ಮಾಡಿದ್ದೇನೆ. ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯ ತುಂಬಿದ್ದೇನೆ ಎಂದು ನಿಖಿಲ್ ಅವರು ತಿಳಿಸಿದರು.
ದ್ವೇಷದ ರಾಜಕೀಯಕ್ಕೆ ಬುನಾದಿ ಹಾಕಿದ್ದೆ ಕಾಂಗ್ರೆಸ್
ದ್ವೇಷದ ರಾಜಕೀಯಕ್ಕೆ ಬುನಾದಿ ಹಾಕಿದ್ದೆ ಕಾಂಗ್ರೆಸ್. ಇಷ್ಟು ವರ್ಷಕ್ಕೆ ದ್ವೇಷದ ರಾಜಕೀಯಕ್ಕೆ ಯಾರು ಸೊಪ್ಪು ಹಾಕಿರಲಿಲ್ಲ. ಎರಡು ವರ್ಷದ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕೀಯ ಹೆಚ್ಚಾಗಿದೆ. ಎಸ್ ಐ ಟಿ, ಲೋಕಾಯುಕ್ತವನ್ನ ಮಿಸ್ ಯೂಸ್ ಮಾಡಿಕೊಂಡ ನಿದರ್ಶನಗಳು ಈ ಸರ್ಕಾರ ದಲ್ಲಿ ಸಾಕಷ್ಟು ಇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಕಾನೂನಾತ್ಮವಾಗಿ ಹೋರಾಟ ನಡೆಸುತ್ತೇವೆ
ಕೇತಗಾನಹಳ್ಳಿಯ ಜಮೀನು 1985ರಲ್ಲಿ ಕುಮಾರಣ್ಣ ಅವರು ಚಿತ್ರರಂಗದ ವೃತ್ತಿ ಜೀವನದಲ್ಲಿ ದುಡಿದಂತ ಹಣದಲ್ಲಿ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿದ್ದು, ಆದರೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಇದು ನಡೆಯುತ್ತಿದೆ.
ಹಲವಾರು ಸರ್ಕಾರ ಗಳು ಬಂದು ಹೋಗಿದೆ. ಆದರೆ ಅವರ ಕಣ್ಣು ಮುಂದೆ ಇರೋದೊಂದೆ ಕೇತಗಾನಹಳ್ಳಿಯ ಜಮೀನು, ಕಾನೂನು ಮೂಲಕ ಹೋರಾಟ ನಡೆಸುತ್ತೇವೆ ಈ ನೆಲದ ಕಾನೂನಿಗೆ ಯಾರೇ ಆಗಲಿ ತಲೆ ಬಾಗಬೇಕು ಎಂದರು.
ಕಾಂಗ್ರೆಸ್ ಗೆ ಹೆಚ್ಡಿಕೆಯೇ ಟಾರ್ಗೆಟ್ ವಿಚಾರಕ್ಕೆ ಮಾತನಾಡಿದ ಅವರು, ಎರಡು ವರ್ಷದಿಂದ ಈ ಸರ್ಕಾರದ ಆಡಳಿತವನ್ನು ನೋಡಿದ್ದೀರಾ, ಸಿ.ಟಿ.ರವಿ ವಿಚಾರದಲ್ಲಿ ಯಾವ ರೀತಿಯ ಡ್ರಾಮಾ ಕ್ರಿಯೇಟ್ ಮಾಡಿದ್ರು ಗೊತ್ತಿದೆ. ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಪುತ್ರನ ಪದ ಬಳಕೆ ಬಗ್ಗೆ ಯಾರು ಪ್ರಶ್ನೆ ಮಾಡಿಲ್ಲ ಈ ಸರ್ಕಾರ ಯಾವ ರೀತಿ ಆಡಳಿತ ಮಾಡ್ತಿದೆ ಎಂದು ನಿಖಿಲ್ ಅವರು ಕಿಡಿಕಾರಿದರು.
ದ್ವೇಷದ ರಾಜಕಾರಣವನ್ನ ಜೆಡಿಎಸ್ ಪಕ್ಷ ಎಂದೂ ಕೂಡ ಮಾಡಿಲ್ಲ. ಇದುಕ್ಕೆ ಸೊಪ್ಪು ಹಾಕುವುದಿಲ್ಲ. ಮುಂದೇನು ಜನ ಅಧಿಕಾರ ಕೊಟ್ಟ ಸಂದರ್ಭದಲ್ಲೂ ಧ್ವೇಶದ ರಾಜಕೀಯ ಮಾಡಲ್ಲ ಮುಂದೇನು ಮಾಡೋದಿಲ್ಲ ಎಂದರು.
ಶಾಸಕ ಕದಲೂರು ಉದಯ್ ಗೆ ಟಾಂಗ್ ಕೊಟ್ಟ ನಿಖಿಲ್
ಮಂಡ್ಯ ಜನರನ್ನ ಛತ್ರಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಅವರು ಅಂಗಲಾಚಿ ಬೇಡುಕೊಂಡರು ನನಗೆ ಪೆನ್ನು, ಪೇಪರ್ ಅಂತ. ಮಂಡ್ಯ ಜನ ನಿಮಗೆ ಪೆನ್ನು ಪೆಪರ್ ಕೊಟ್ಟಿದಾರೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ 6 ಕಾಂಗ್ರೆಸ್‌ನ ಶಾಸಕರು ಗೆಲ್ಲಿಸಿಕೊಟ್ಟಿದ್ದಾರೆ.
ಛತ್ರಿ ಅಂದ್ರೆ ಏನು ಅನ್ನೋದ್ರ ಬಗ್ಗೆ ಮಂಡ್ಯದ ಪ್ರಭಾವಿ ಶಾಸಕರೊಬ್ಬರು ವಿಶ್ಲೇಷಣೆ ಮಾಡಿದ್ದಾರೆ. ಛತ್ರಿ ಅಂದರೆ ಅತ್ಯಂತ ಬುದ್ದಿವಂತರು, ಪ್ರಬುದ್ಧರು ಅಂತ ಕಾಂಗ್ರೆಸ್ ಮಹಾ ನಾಯಕರು ಹೇಳಿದ್ದಾರೆ. ಮತ್ತೆ ಯಾವ ನಾಯಕರು ಇದರ ಬಗ್ಗೆ ಏನು ಹೇಳ್ತಾರೆ ನೋಡೋಣ ಎಂದು ಪರೋಕ್ಷವಾಗಿ ಮದ್ದೂರು ಶಾಸಕ ಉದಯ್ ಅವರಿಗೆ ಟಾಂಗ್ ಕೊಟ್ಟರು.
ಹೆಸರು ಬದಲಾವಣೆಯಾದ್ರೆ ಅಭಿವೃದ್ಧಿ ಆಗಿಬಿಡುತ್ತಾ.?
ರಾಮನಗರ ಹೆಸರು ಬದಲಾವಣೆ ಹಿನ್ನಡೆ ವಿಚಾರಕ್ಕೆ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಆಗುತ್ತಾ.? ಇವತ್ತು ಎಲ್ಲಿಗೆ ಬಂದು ನಿಂತಿದೆ. ಎಲ್ಲದರ ಬೆಲೆ ಏರಿಕೆ ಆಗುತ್ತಲೇ ಇದೆ. ಬಜೆಟ್ ನಲ್ಲಿ ಸಾಲ ದುಪ್ಪಟ್ಟಾಗಿದೆ.
ಮಾತೆತ್ತಿದರೇ ಗ್ಯಾರಂಟಿ ಯೋಜನೆ ಅಂತಾರೆ. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ದಿವಾಳಿ ಆಗಿದೆ. ತೆಲಂಗಾಣದಲ್ಲೂ ಕೂಡ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಗ್ಯಾರಂಟಿ ಕೊಡೋದಕ್ಕೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಅಂತ. ಅಲ್ಲೂ ಕೂಡ ದಿವಾಳಿಯಾಗಿದೆ. ನಮ್ಮ ರಾಜ್ಯದ ಲ್ಲೂ ದಿವಾಳಿ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದರು.
ಮಂಡ್ಯ ಜನತೆ ಬುದ್ದಿ ಕಲಿಸುತ್ತಾರೆ
ಮಂಡ್ಯ ಜನತೆ ನಿಜಕ್ಕೂ ಸ್ವಾಭಿಮಾನಿಗಳು. ಈಗಾಗಲೇ ಸ್ವಾಭಿಮಾನದ ಹೆಸರಲ್ಲಿ ಮತ ಪಡೆದು ಹೋದವರು ಇದ್ದಾರೆ. ಆದರೆ ನಿಜಕ್ಕೂ ಸ್ವಾಭಿಮಾನಿ ಅಂತ ಈ ರಾಜ್ಯದಲ್ಲಿ ಇದ್ದರೆ ಮಂಡ್ಯ ಜಿಲ್ಲಾ ಜನತೆ ಆ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಏನಾಗುತ್ತೆ ಜಿಲ್ಲೆಯ ಜನತೆ ಉತ್ತರ ಕೊಡ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಅಮೃತೇಶ್ವರನ ಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಸಂಘ ಉದ್ಘಾಟನೆ ಸಮಾರಂಭ ಮತ್ತು ಶ್ರೀ ಮತ್ತಿತಾಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ. ಸ್ವಾಮಿಯ ಆಶೀರ್ವಾದ ಪಡೆದರು.