ಹೈದರಾಬಾದ್: ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್ ರಾಜ್ (Prakash Raj), ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಭಾಟಿ ಸೇರಿದಂತೆ 25ಕ್ಕೂ ಹೆಚ್ಚು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ 25 ನಟ,ನಟಿಯರ ವಿರುದ್ದ ತೆಲಂಗಾಣದಲ್ಲಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸಂಬ್ರಿಟಿಗಳು ಮತ್ತು ಪ್ರಭಾವಿಗಳಲ್ಲಿ ಪ್ರಣೀತಾ, ನಿಧಿ ಅಗರ್‌ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌದರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಸನ್ನಿ ಯಾ, ವಿಷ್ಣು, ಸನ್ನಿಯಾ ಪ್ರಿಯಿ, ನಾನು ಶ್ಯಾಮಲಾ, ಟೇಸ್ಟಿ ತೇಜ ಮತ್ತು ಬಂಡಾರು ಶೇಷಾಯನಿ ಸುಪ್ರಿತಾ ಸೇರಿದ್ದಾರೆ.

ಈ ಪ್ಲಾಟ್‌ಫಾರ್ಮ್‌ಗಳು ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳ ಸಹಾಯದಿಂದ ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ತಮ್ಮ ಅಪ್ಲಿಕೇಶನ್‌ಗಳು ಮತ್ತು ವೆಬ್ ಸೈಟ್‌ಗಳನ್ನು ಪ್ರಚಾರ ಮಾಡುತ್ತವೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
“ಈ ಅಕ್ರಮ ವೇದಿಕೆಗಳಲ್ಲಿ ಸಾವಿರಾರು ಲಕ್ಷ ರೂಪಾಯಿಗಳು ಭಾಗಿಯಾಗಿವೆ ಮತ್ತು ಇದು ಅನೇಕ ಕುಟುಂಬಗಳನ್ನು, ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ” ಎಂದು ಆರೋಪಿಸಲಾಗಿದೆ.
ಇನ್ನೂ ವಿಜಯ್ ದೇವರಕೊಂಡ ತಂಡ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದೆ.
ವಿಜಯ್ ದೇವರಕೊಂಡ ಅವರು ಕಾನೂನಿನ ಪ್ರಕಾರ ನಡೆಸುವ ಕೌಶಲ್ಯ ಆಧಾರಿತ ಆಟಗಳಿಗೆ ಮಾತ್ರ ಜಾಹೀರಾತು ನೀಡುತ್ತಾರೆ.
ವಿಜಯ್ ದೇವರಕೊಂಡ ಏ.23ಕ್ಕೆ ಪರವಾನಗಿ ಪಡೆದ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿದ್ದಾರೆ. ರಮ್ಮಿ ಕೌಶಲ ಆಧಾರಿತ ಆಟ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಬಾರಿ ಹೇಳಿದೆ.
ವಿಜಯ್ ದೇವರಕೊಂಡ ಯಾವುದೇ ಕಂಪನಿಯ ಜಾಹೀರಾತು ಅಥವಾ ಜಾಹೀರಾತುದಾರರಾಗಿದ್ದರೂ, ಕಂಪನಿಯು ಕಾನೂನುಬದ್ಧವಾಗಿ ನಡೆಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಸಂಪೂರ್ಣವಾಗಿ ಪರಿಶೀಲಿಸುತ್ತೇವೆ ಎಂದಿದೆ.