ಹೊಸದಿಲ್ಲಿ: ತಾಂತ್ರಿಕ ದೋಷದ ಕಾರಣ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ (sunita williams) ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಭೂಮಿಗೆ ಮರಳಿದ್ದಾರೆ.
ಸುನೀತಾ ವಿಲಿಯಮ್ಸ್, ಬುಚ್ ವಿಲ್ಲೋರ್, ನಿಕ್ ಹೇಗ್, ಅಲೆಕ್ಸಾಂಡರ್ ಗೊರ್ಬನೊವ್ ಅವರಿದ್ದ ಸ್ಪೇಸ್‌ಎಕ್ಸ್ ಡ್ಯಾಗನ್ ಕ್ಯಾಪ್ಸುಲ್ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದೆ. ನಾಸಾ ಹಾಗೂ ಸ್ಪೇಸ್ ಎಕ್ಸ್‌ನ ಜಂಟಿ ಪ್ರಯತ್ನ ಯಶಸ್ವಿಯಾಗಿದೆ.
ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಮೂಲಕ ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳೆದ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿದ್ದ ‘ಡ್ರಾಗನ್’ ಹೆಸರಿನ ಗಗನನೌಕೆಯನ್ನು ಭಾನುವಾರ ಬೆಳಿಗ್ಗೆ ಐಎಸ್‌ಐಎಸ್‌ಗೆ ಡಾಕಿಂಗ್ (ಜೋಡಣೆ) ಮಾಡಲಾಗಿತ್ತು.
ಭಾರತೀಯ ಕಾಲಮಾನದ ಪ್ರಕಾರ ಇಂದು(ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಫ್ಲೋರಿಡಾದ ಸಮುದ್ರದ ಮೇಲೆ ಲ್ಯಾಂಡ್ ಆಗಿದ್ದಾರೆ.
ಬಳಿಕ ನಾಸಾ ವಿಜ್ಞಾನಿಗಳ ತಂಡ ಸಮುದ್ರದಿಂದ ಸುರಕ್ಷಿತವಾಗಿ ನೌಕೆಯನ್ನು ದಡಕ್ಕೆ ಕರೆತರಲಾಗಿದೆ.