ದೊಡ್ಡಬಳ್ಳಾಪುರ (Doddaballapura): 2025ರ ಮೂರನೇ ತಿಂಗಳ ಅವಧಿ ಮುಗಿಯುವ ಮುನ್ನವೇ ತಾಲೂಕಿನಲ್ಲಿ ಸಂಭವಿಸಿದ ವಿವಿಧ ಅಪಘಾತ ಪ್ರಕರಣಗಳಲ್ಲಿ 50ಮಂದಿ ಸಾವನಪ್ಪಿರುವು ವಿಚಾರ ಬೆಳಕಿಗೆ ಬಂದಿದೆ.
ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಗಂಭೀರ ಚರ್ಚೆಯಾಗಿದ್ದು, 2025ರ 3 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಸಾವು, 2024 ರಲ್ಲಿ 101 ಮಂದಿ ಸಾವನಪ್ಪಿದ್ದು, 267 ಮಂದಿ ಗಾಯಗೊಂಡಿದ್ದಾರೆಂದು ಗೃಹ ಸಚಿವ ಡಾ.ಪರಮೇಶ್ವರ ಉತ್ತರ ನೀಡಿದ್ದಾರೆ.
ಈ ಕುರಿತಂತೆ ಶಾಸಕ ಧೀರಜ್ ಮುನಿರಾಜು ಪ್ರಶ್ನೆಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಉತ್ತರ ನೀಡಿದ್ದು, ಈ ಮುಂಚೆ ಹೇಳಿದಂತೆ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆಗೆ ಕುರಿತು ಹಳೆಯ ಭರವಸೆ ಮತ್ತೆ ನೀಡಿದ್ದಾರೆ.
ಅಲ್ಲದೆ ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕೈಗೊಂಡ ಕ್ರಮಗಳಂತೆ ದೊಡ್ಡಬಳ್ಳಾಪುರ ಮೂಲಕ ಹಾದು ಹೋಗಿರುವ ದಾಬಸ್‌ಪೇಟೆ ಹೊಸಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಕೂಡ ದೊಡ್ಡಬಳ್ಳಾಪುರದಲ್ಲಿ ಸಂಚಾರಿ ಪೊಲೀಸ್ ಠಾಣೆ ಏಕೆ ಮಾಡಿಲ್ಲವೆಂದು ಪ್ರಶ್ನೆ ಮಾಡಿದ್ದು, ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಅಪಘಾತದ ಸಂಗ್ರಹ ಚಿತ್ರ ಬಳಸಲಾಗಿದೆ.