Daily story; punishment

ಹರಿತಲೇಖನಿ ದಿನಕ್ಕೊಂದು ಕಥೆ: ಶಿಕ್ಷೆ

Daily story: ಈ ಪ್ರಪಂಚದಲ್ಲಿ ಅನೇಕ ಜನರು ತಪ್ಪು ಮಾಡಿದಾಗ ಶಿಕ್ಷೆಗೆ ಒಳಗಾಗುವುದುಂಟು. ಶಿಕ್ಷೆಯ ಉದ್ದೇಶ-ಶಿಕ್ಷ ಣವೇ ಆಗಿದೆ. ಒಮ್ಮೆ ತಪ್ಪು ಮಾಡಿದವನು ಮುಂದಕ್ಕೆಂದೂ ಅಂತಹ ತಪ್ಪು ಮಾಡದಿರುವಂತಹ ಶಿಕ್ಷಣ ನೀಡುವುದಕ್ಕಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ

ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳಿವೆ. ಇದರಿಂದ ನಮ್ಮ ಸಮಾಜವನ್ನು, ಜನಜೀವನವನ್ನು ಸರಿ ಮಾರ್ಗದಲ್ಲಿ ಮುನ್ನಡೆಸುವಂತಹ ಕೆಲಸ ಸಾಧ್ಯ. ಈ ಬಗೆಯ ನ್ಯಾಯಾಂಗ ಮಹತ್ವವನ್ನು ನಿರೂಪಿಸುವ ಒಂದು ಪ್ರಸಂಗ ಇಲ್ಲಿದೆ.

ಚೀನಾ ದೇಶದಲ್ಲಿ ಒಬ್ಬ ಚಿಂತಕರ ಪ್ರಸಿದ್ಧಿಯನ್ನು ಕೇಳಿ ಅಲ್ಲಿಯ ಅರಸನು ಅವರನ್ನು ತನ್ನ ರಾಜ್ಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದನು. ಈ ನ್ಯಾಯಾಧೀಶರು ಸೂಕ್ತ ನ್ಯಾಯ ತೀರ್ಪುಗಳಿಂದಾಗಿ ಬಹು ವಿಖ್ಯಾತರಾದರು.

ಅಲ್ಲಿಯ ರಾಜಧಾನಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯ ಬಳಿ ಸಾಕಷ್ಟು ಸಂಪತ್ತು ಇತ್ತು. ಇದೆಲ್ಲವೂ ಬಡ ಜನರ ಶೋಷಣೆಯಿಂದ ಸಂಗ್ರಹಿಸಿದ್ದು, ಅದರ ರಕ್ಷ ಣೆಗಾಗಿ ಬಲಿಷ್ಠ ರಕ್ಷ ಕರನ್ನೂ ನೇಮಿಸಿಕೊಂಡಿದ್ದ. ಹಾಗಿದ್ದರೂ ಒಮ್ಮೆ ಕಳ್ಳತನ ನಡೆದೇ ಬಿಟ್ಟಿತು ಹಾಗೂ ಕಳ್ಳನನ್ನು ಬಂಧಿಸಲಾಯಿತು.

ಈ ಕಳ್ಳನನ್ನು ಸುಪ್ರಸಿದ್ಧ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ಆತನು ತನ್ನ ಕಳ್ಳತನದ ಅಪರಾಧವನ್ನು ಒಪ್ಪಿಕೊಂಡದ್ದಲ್ಲದೆ, ಈ ಹಿಂದೆ ಮಾಡಿದ್ದ ಕಳ್ಳತನಗಳನ್ನೂ ಒಪ್ಪಿಕೊಂಡನು.

ಆ ಕಳ್ಳನಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶರು ಶ್ರೀಮಂತ ವ್ಯಾಪಾರಿಯನ್ನು ಕರೆಸಿ, ಆತನು ಧನ ಸಂಗ್ರಹ ಮಾಡಿದ ವಿಧಾನದ ಬಗ್ಗೆ ಪ್ರಶ್ನಿಸತೊಡಗಿದರು. ಆದರೆ ತನ್ನ ಗುಟ್ಟು ಬಿಡಲೊಪ್ಪದ ಆ ವ್ಯಾಪಾರಿ ‘ಎಲ್ಲವೂ ನನ್ನ ವ್ಯಾಪಾರದ ಫಲವಾಗಿದೆ’ ಎಂದು ವಾದಿಸಿದನು. ಬಡವರ ಶೋಷಣೆಯ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ.

ನ್ಯಾಯಾಧೀಶರು ವ್ಯಾಪಾರಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದರು. ಸಿಟ್ಟುಗೊಂಡ ವ್ಯಾಪಾರಿ ಪ್ರಶ್ನಿಸಿದ- ‘ನೀವು ಕಳ್ಳನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದರೆ, ನನಗೇಕೆ ಎರಡು ವರ್ಷ ವಿಧಿಸುತ್ತೀರಿ?’. ನ್ಯಾಯಾಧೀಶರು ಸಮಾಧಾನದಿಂದ ಉತ್ತರಿಸಿದರು- ‘ಆ ಕಳ್ಳನು ತಪ್ಪನ್ನು ಒಪ್ಪಿಕೊಂಡನು. ಆದ್ದರಿಂದ ಅವನಲ್ಲಿ ಹೃದಯ ಪರಿವರ್ತನೆ ಸಾಧ್ಯತೆ ಇದೆ. ಆದರೆ ನೀವು ಒಪ್ಪಿಕೊಳ್ಳಲೇ ಇಲ್ಲ. ಆದ್ದರಿಂದ ಈ ಶಿಕ್ಷೆಯಿಂದ ನಿಮಗಾವ ಶಿಕ್ಷ ಣವೂ ಸಿಗಲಾರದು’ ಎಂದಾಗ ವ್ಯಾಪಾರಿ ತಲೆ ತಗ್ಗಿಸಿದ.

ಈ ಪ್ರಪಂಚದಲ್ಲಿ ಮಾನವನು ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷ ಣಕ್ಕಿಂತ ಬದುಕೆಂಬ ವಿದ್ಯಾಲಯದಲ್ಲಿ ಪಡೆಯುವ ಶಿಕ್ಷ ಣವು ಹೆಚ್ಚು ಮೌಲ್ಯಯುತವಾದುದೇ ಆಗಿದೆ.

ಕಾನೂನು ಕಟ್ಟಳೆ, ರೀತಿ-ರಿವಾಜು, ನೀತಿ- ನಿಯಮಗಳನ್ನು ಮೀರಿದವರಿಗೆ ಸರಕಾರ ಇಲ್ಲವೇ ಸಮಾಜವು ನೀಡುವ ಶಿಕ್ಷೆಯೆಂದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಭವಿಷ್ಯದಲ್ಲೆಂದೂ ಅಂತಹ ತಪ್ಪು ಮಾಡದೆ ಸಭ್ಯ ನಾಗರಿಕರಾಗಿ ಬದುಕೆಂಬ ಪ್ರೇರಣೆ ನೀಡುವ ಹಾಗೆ ಪರಿವರ್ತನೆ ಮಾಡುವ ಉಜ್ವಲ ಶಿಕ್ಷ ಣವೇ ಆಗಿದೆ.

ಇಂತಹ ವ್ಯಕ್ತಿತ್ವ ಪರಿವರ್ತನೆಯ ಬಗ್ಗೆ ಅಭಿಮಾನ ಪಡಬೇಕಾಗಿದೆ.

ಕೃಪೆ: ಡಾ.ಡಿ.ವೀರೇಂದ್ರ ಹೆಗ್ಗಡೆ. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)

ರಾಜಕೀಯ

ರಾಜ್ಯದಲ್ಲಿ 50% ಭ್ರಷ್ಟಾಚಾರ; ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯದಲ್ಲಿ 50% ಭ್ರಷ್ಟಾಚಾರ; ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಐವತ್ತು ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಂಸದ Basavaraj Bommai

[ccc_my_favorite_select_button post_id="105001"]
ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಇಷ್ಟು ದಿನ ಬಾಯಿ ಮಾತಲ್ಲೇ ಸುಂಕ ಸಂಘರ್ಷದ ಮಾತುಗಳನ್ನು ಆಡುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮಧ್ಯರಾತ್ರಿ 2.20 (ಭಾರತೀಯ ಕಾಲಮಾನ) trump

[ccc_my_favorite_select_button post_id="104924"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
‘ಪ್ರೀತಿಸಿದವಳಿಗಾಗಿ ದೊಡ್ಡಬಳ್ಳಾಪುರ ಬಾರ್ನಲ್ಲಿ ಬಡಿದಾಟ: ದೂರು ದಾಖಲು’

‘ಪ್ರೀತಿಸಿದವಳಿಗಾಗಿ ದೊಡ್ಡಬಳ್ಳಾಪುರ ಬಾರ್ನಲ್ಲಿ ಬಡಿದಾಟ: ದೂರು ದಾಖಲು’

ಗುಂಪುಗಳ ನಡುವಿನ ಕಂಡು ಬೆಚ್ಚಿ ಬಿದ್ದ ಜನರು. ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಮೀತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. Doddaballapura

[ccc_my_favorite_select_button post_id="105003"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!