ಬೆಂಗಳೂರು: IPLಗೆ ಕ್ಷಣಗಣನೆ ಆಭವಾಗಿದ್ದು, ಕ್ರಿಕೆಟ್ ಜ್ವರ ವ್ಯಾಪಿಸುತ್ತಿದೆ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ, ದಕ್ಷಿಣಆಫ್ರಿಕಾದ ಮೂಲದ ಎಬಿ.ಡಿ ವಿಲ್ಲಿಯರ್ಸ್ (ABD) ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
‘ವಿರಾಟ್ ಕೊಹ್ಲಿ ಈ ಐಪಿಎಲ್‌ನಲ್ಲಿ ಎಂದಿನಂತೆ ಸ್ಮಾರ್ಟ್ ಕ್ರಿಕೆಟ್ ಆಟದತ್ತ ಗಮನ ಕೊಡಬೇಕು. ಆಟದ ಮೇಲೆ ನಿಯಂತ್ರಣ ಸಾಧಿಸುವು ದನ್ನು ಮುಂದುವರಿಸಬೇಕು.
ಆರ್‌ಸಿಬಿ ತಂಡದಲ್ಲಿ ಸಾಕಷ್ಟು ಸ್ಪೋಟಕ ದಾಂಡಿಗರಿದ್ದು, ಫಿಲ್ ಸಾಲ್ಟ್, ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಲಿದ್ದಾರೆ ಎಂದಿದ್ದಾರೆ.
ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗದ ನಿಜವಾದ ನಾಯಕ, ತಮಡವು ದಿಢೀರ್ ಪತನ ಕಾಣದಂತೆ ನೋಡಿಕೊಳ್ಳಬೇಕಿದೆ ಎಂದೂ ವಿಲ್ಲಿಯರ್ಸ್ ಕೊಹ್ಲಿಗೆ ಕಿವಿಮಾತು ಹೇಳಿದ್ದಾರೆ.