Site icon Harithalekhani

ಹರಿತಲೇಖನಿ ದಿನಕ್ಕೊಂದು ಕಥೆ: ತಪಸ್ಸು ಮಾಡಿದ ಹಾಲು..!

Daily story: Penance of milk

Daily story: Penance of milk

Daily story: ಒಂದು ಸಲ ಹಾಲು (Milk) ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದರಂತೆ.

ಆಗ ಹಾಲು ಹೇಳಿತಂತೆ.’ ದೇವರೇ ನಾನು ಹಾಲು, ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ. ನನಗೆ ಹಾಲಾಗೇ ಇರುವಂತೆ ವರ ಕೊಡು ‘ ಎಂದು ಬೇಡಿಕೊಂಡಿತಂತೆ

ಆಗ ದೇವರು ನಕ್ಕು ಎಲೈ. ಹಾಲೇ ಇಲ್ಲಿ ಕೇಳು,,ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು.

ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ ಮೊಸರಾಗಿ ಕಡೆದರೆ. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ.

ಬೆಣ್ಣೆಯನ್ನು ಹದವಾಗಿ ಕಾಯಿಸಿ ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ ತುಂಬಾ ದಿನ ಬದುಕುವೆ ಹಾಗೂ ಔಷಧವಾಗುವೆ
ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ

ಈಗ ಹೇಳು ಒಂದು ದಿನ ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ.. ಅಥವಾ ಕ್ಷಣ ಕ್ಷಣವೂ. ಅನುದಿನವೂ ದಿನ ದಿನವೂ. ಬೆಳೆದು ರೂಪಾಂತರ ಪಡೆದು ಭಗವಂತನಿಗೆ ಬೆಳಕಾಗುವೆಯಾ ‘ ಎಂದು ದೇವರು ಪ್ರಶ್ನಿಸಿದನಂತೆ

ದೇವರ ಮಾತಿಗೆ ಹಾಲು ಮೂಕವಾಯಿತು
ಶರಣಾಯಿತು. ತನ್ನ ಮನದ ಅಂಧಕಾರ ಮದದಿಂದ ಹೊರಬಂತು ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

Exit mobile version