ದೊಡ್ಡಬಳ್ಳಾಪುರ: ಸುಮಾರು 45 ವರ್ಷ ದ ವ್ಯಕ್ತಿಯೋರ್ವ ವೇಗವಾಗಿ ಬಂದ ರೈಲಿಗೆ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ನಡೆದಿದೆ.
ಮೃತನನ್ನು 45 ವರ್ಷದ ದೇವೇಂದ್ರ ಅರಕಸಾಲಿ ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಲವಾಡ ಗ್ರಾಮದವರಾಗಿದ್ದು, ನಗರದ ತೇರಿನಬೀದಿಯ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.
ಇಂದು (ಮಾ.17) ಮಧ್ಯಾಹ್ನ ಸುಮಾರು ಎರಡು ಗಂಟೆ ವೇಳೆಗೆ ಸಿದ್ದೇನಾಯಕನಹಳ್ಳಿ ಅಂಡರ್ ಪಾಸ್ ಸಮೀಪ ರೈಲಿಗೆ ಸಿಲುಕಿ ಸಾವನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲವಾಗಿದ್ದು, ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.