ದೊಡ್ಡಬಳ್ಳಾಪುರ: ನಾಳೆ (ಮಾ.17) ಕನ್ನಡ ಚಿತ್ರರಂಗದ ಖ್ಯಾತ ನಟ, ಅಭಿಮಾನಿಗಳ ದೇವರು, ಕರ್ನಾಟಕ ರತ್ನ, ದಿವಂಗತ ಪುನೀತ್ ರಾಜ್‌ಕುಮಾರ್ (Appu) ಅವರ ಜನ್ಮದಿನ.
ಅಪ್ಪು ದೈಹಿಕವಾಗಿ ದೂರಾದರೂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತ ಎಂಬಂತೆ ಅವರ ಅಭಿಮಾನಿಗಳು ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ನಡೆಸಿದ್ದಾರೆ.
ಅಂತೆಯೇ ಇಂದು ಪವರ್ ಸ್ಟೆಪ್ಸ್ ಹೆಸರಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.
ನಗರದ ಭಗತ್ ಸಿಂಗ್ ಕ್ರಿಡಾಂಗಣದಲ್ಲಿ ಆಯೋಜಿಲಾದ ಮ್ಯಾರಥಾನ್ ಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು
ಐದು ಕಿಲೋಮೀಟರ್ ದೂರದ ಮ್ಯಾರಥಾನಲ್ಲಿ ಮಕ್ಕಳು, ಮಹಿಳೆಯ ಸೇರಿದಂತೆ ಅಪ್ಪು ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು.