Site icon Harithalekhani

MP ಟಿಕೆಟ್ ಕಳೆದುಕೊಂಡು ಒಂದು ವರ್ಷ; ಪ್ರತಾಪ್ ಸಿಂಹ ಬೇಸರ

One year after losing MP ticket; Pratap Simha

One year after losing MP ticket; Pratap Simha

ಬೆಂಗಳೂರು: ಸಂಸದನಾಗಿ ಸಕ್ರಿಯವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿದರು, ಸ್ವಪಕ್ಷೀಯರ ರಾಜಕೀಯ ಕುತಂತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ (Pratap simha) ಅವರಿಗೆ
ಟಿಕೆಟ್ ಕೈತಪಿತು.

ಇದರಿಂದ ಕೆರಳಿದ ಪ್ರತಾಪ್ ಸಿಂಹ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿದ ಕುತಂತ್ರವೇ ಇದಕ್ಕೆ ಕಾರಣ ಎಂಬಂತೆ ಬಂಡಾಯ ಬಣವಾದ ಯತ್ನಾಳ್ ತಂಡದೊಂದಿಗೆ ಸೇರಿ ವಿಜಯೇಂದ್ರ ಹಠಾವೋ ಹೋರಾಟದಲ್ಲಿ ಕೈ ಜೋಡಿಸಿದ್ದರು ಎಂದೆ ಅನೇಕ ಬೆಂಬಲಿಗರ ಅನಿಸಿಕೆ.

ಇದರ ಬೆನ್ನಲ್ಲೇ ಅವರು ಮಾಡಿರುವ ಟ್ವಿಟ್ (X) ಒಂದು ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕುತಂತ್ರದಿಂದ ಟಿಕೆಟ್ ತಪ್ಪಿಸಿದರು ಎಂಬ ಬೇಸರ ಅವರ ಮನಸ್ಸಿನಿಂದ ದೂರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಪ್ರತಾಪ್ ಸಿಂಹ ಟ್ವಿಟ್

MP ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ, ಪ್ರೋತ್ಸಾಹ ಇವತ್ತಿಗೂ ಹಾಗೇ ಇದೆ ಮತ್ತು ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು 8 FIR ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ.

ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ ಎಂದಿದ್ದಾರೆ.

Exit mobile version