ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯ ತೇರಿಬೀದಿಯಲ್ಲಿರುವ ಇತಿಹಾಸದ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತ್ತು.
ಬ್ರಹ್ಮರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ರರು ಶ್ರದ್ದೆ ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು ಹಣ್ಣು ದವನ ಅರ್ಪಿಸಿ ಭಕ್ತಿ ಭಾವ ಮೆರೆದರು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಸುಪ್ರಭಾತ ಸೇವೆ, ತೊಮಾಲೆ ಸೇವೆ, ನವಗ್ರಹ ಪೂಜೆ, ರಥದ ಮುಂಭಾಗದಲ್ಲಿ ಹೋಮಗಳನ್ನು ನಡೆಸಲಾಯಿತು.
ವಿಶೇಷವಾದ ಪುಷ್ಪಗಳಿಂದ ಅಲಂಕರಿಸಿದ್ದ ಸ್ವಾಮಿಗೆ ಸುಮಂಗಲಿಯರಿಂದ ಭಕ್ತಿಗೀತೆ ಗಾಯನ, ಭಜನೆ, ಆಗಮಿಕರ ಮಂತ್ರ ಪಠಣೆಗಳು, ಭಕ್ತಜನ ಸಾಗರದ ಜಯ ಘೋಷದೊಂದಿಗೆ ರಥೋತ್ಸವ ನಡೆಯಿತ್ತು.
ಜಾತ್ರೆಯ ಪ್ರಯುಕ್ತ ದೇವಾಲಯದ ಜೀರ್ಣೋದ್ದರ ಸಮಿತಿಯಿಂದ ರಥೊತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಾನಕ ಕೋಸಂಬರಿ ನೀರು ಮಜ್ಜಿಗೆ ವಿತರಿಸಲಾಯಿತು.