ದೊಡ್ಡಬಳ್ಳಾಪುರ: ಸುಮಾರು 15 ವರ್ಷದ ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಪಿಂಡಕೂರುತಿಮ್ಮನಹಳ್ಳಿ ಹೊರವಲಯದಲ್ಲಿ ಸಂಭವಿಸಿದೆ.
ಮೃತನನು ಪಿಂಡಕೂರುತಿಮ್ಮನಹಳ್ಳಿ ನಿವಾಸಿಗಳಾದ ಮಂಜಮ್ಮ, ಸುಬ್ಬರಾಯಪ್ಪ ದಂಪತಿಗಳ ಪುತ್ರ 15 ವರ್ಷ ರವಿಕುಮಾರ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾಗಿದ್ದು, ಖಾಸಗಿ ವ್ಯಕ್ತಿಗೆ ಸೇರಿದ ತೋಟದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಬಾಲಕ ಸಾವನಪ್ಪಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.