ದೊಡ್ಡಬಳ್ಳಾಪುರ (Doddaballapura): ಕಾರಿನಲ್ಲಿದ್ದವರು ಏಕಾಏಕಿ ಬಾಗಿಲು ತೆರೆದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯ ಶಿಕ್ಷಕ ಸಿದ್ದಲಿಂಗಯ್ಯ ಎಂದು ತಿಳಿದುಬಂದಿದೆ.
ಬ್ಯಾಂಕ್ ಕಾರ್ಯದ ನಿಮಿತ್ತ ಶಿಕ್ಷಕ ಸಿದ್ದಲಿಂಗಯ್ಯ ದೊಡ್ಡಬಳ್ಳಾಪುರಕ್ಕೆ ಬಂದಿದ್ದು, ಗಾಂಧಿ ಪ್ರತಿಮೆ ಬಳಿಯಿಂದ ಡಿ ಕ್ರಾಸ್ಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಶಿಕ್ಷಕ ಸಿದ್ದಲಿಂಗಯ್ಯ ಅವರ ಕಾಲಿಗೆ ತೀವ್ರವಾದ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.