Site icon Harithalekhani

Darshan: ದೂರಾದ ದೊಡ್ಮಗ ಎಂದ ಖಾಸಗಿ ಚಾನಲ್‌ಗಳಿಗೆ ಸುಮಲತಾ ಚಾಟಿ ಏಟು..!

Darshan: Sumalatha Chati Etu for private channels!

Darshan: Sumalatha Chati Etu for private channels!

ಬೆಂಗಳೂರು: ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ಬಳಿಕ ನ್ಯಾಯಾಲಯದಿಂದ ಜಾಮೀನಲ್ಲಿ ಹೊರಗಿರುವ ನಟ ದರ್ಶನ್ (Darshan) ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಅನ್‌ಫಾಲೋ ಮಾಡಿರುವುದು ಕೆಲ ಖಾಸಗಿ ಸುದ್ದಿ ವಾಹಿನಿಗಳಿಗೆ ಸುದ್ದಿಯಾಗಿದೆ.

ಅದರಲ್ಲಿಯೂ ಸುಮಲತಾ ಅಂಬರೀಶ್ ಅವರ ವಿರುದ್ದ ಮುನಿದಿದ್ದಾರೆ ಎಂಬಂತೆ ನಿನ್ನೆ ಪೂರ್ತಿ ವರದಿ ಮಾಡಿವೆ. ಹೌದು ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ ಐವರನ್ನು ಫಾಲೋ ಮಾಡುತ್ತಿದ್ದರು. ಸುಮಲತಾ, ಅಭಿಷೇಕ್ ಅಂಬರೀಶ್, ಅವಿವಾ, ಪುತ್ರ ವಿನೀಶ್ ಹಾಗೂ ಡಿ ಕಂಪನಿ ಇವೆಷ್ಟು ಜನರನ್ನು ಮಾತ್ರ ದಚ್ಚು ಫಾಲೋ ಮಾಡುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಈ ಐವರನ್ನು ಅನ್ ಫಾಲೋ ಮಾಡಿದ್ದಾರೆ.

ಆದರೆ ಇಷ್ಟಕ್ಕೆ ದಿನ ಪೂರ್ತಿ ಸುದ್ದಿ ಮಾಡಿದ. ಕೆಲ ಖಾಸಗಿ ಸುದ್ದಿವಾಗಿನಿಗಳು ಹಾಗೂ ಕೆಲ ಪತ್ರಿಕೆಗಳು, ದರ್ಶನ್ ಜೈಲು ಸೇರಿದಾಗ ಹಲವು ಸೆಲೆಬ್ರಿಟಿಗಳು ಜೈಲಿಗೆ ಭೇಟಿ ದರ್ಶನ್ ಕುಶೋಪರಿ ವಿಚಾರಿಸಿದ್ದರು. ಆದರೆ ಸುಮಲತಾ ಅವರು ಮಾತ್ರ ದರ್ಶನ್ ಅವರನ್ನು ಭೇಟಿಯಾಗಲಿಲ್ಲ.

ದಾಸ ಜೈಲಿನಿಂದ ಹೊರಬಂದ ಬಳಿಕ ದರ್ಶನ ಪರವಾಗಿ ಮಾತನಾಡಿದ್ದರು. ಆದರೆ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿಯೇ ದರ್ಶನ್ ಸುಮಲತಾ ಅವರನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫಾಲೋ ಮಾಡಿದ್ದಾರೆ ಎಂದು ವರದಿ ಮಾಡಿವೆ

ಅಲ್ಲದೆ ಸುಮಲತಾ ಅವರ ಈ ಮುಂಚಿನ ಯಾವುದೋ ಪೋಸ್ಟ್ ಒಂದನ್ನು ಇದಕ್ಕೆ ಲಿಂಕ್ ಮಾಡಿದ ದೂರಾದ ದೊಡ್ಡ ಮಗ, ಅಮ್ಮನ ಮೇಲೆ ಮುನಿಸು ಎಂಬಂತೆ ಪ್ರಸಾರ ಮಾಡಿ ದಿನ ಕಳೆದಿವೆ.

ಸುಮಲತಾ ಚಾಟಿ ಏಟು

ಇನ್ನೂ ಕೆಲ ಖಾಸಗಿ ಚಾನಲ್ ಗಳ ಅತಿರೇಕದ ವರದಿಗೆ ಮಾಜಿ ಸಂಸದೆ ಸುಮಲತಾ ತಿರುಗೇಟು ನೀಡಿದ್ದು, ನನ್ನ ಹಿಂದಿನ ಒಂದು ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ.

ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ.

ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು.

ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.

ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್‌ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.

ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ ಎಂದು ದಿನ ಪೂರ್ತಿ ದರ್ಶನ್, ಸುಮಲತಾ ವಿಚಾರವನ್ನೆ ಆಹಾರ ಮಾಡಿಕೊಂಡ ಖಾಸಗಿ ಚಾನಲ್ ಗಳಿಗೆ ಚಾಟಿ ಏಟು ನೀಡಿದ್ದಾರೆ.

Exit mobile version