ದೊಡ್ಡಬಳ್ಳಾಪುರ: ತಾಲೂಕಿನ ಮಾಚಗೊಂಡನಹಳ್ಳಿ ವಿವಿದೋಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಚುನಾವಣೆ ಅಧಿಕಾರಿ ನಾಗಭೂಷಣ್ ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಅಧ್ಯಕ್ಷರಾಗಿ ಎನ್. ಜಗನ್ನಾಥ (ಆಡಿಟರ್ ), ಉಪಾಧ್ಯಕ್ಷರಾಗಿ ಎ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

12 ಸದಸ್ಯತ್ವ ಬಲದ VSSN ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ 9 ಮಂದಿ ನಿರ್ದೇಶಕರು ಭಾಗವಹಿಸಿದ್ದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಉದ್ಯಮಿ ಸಂದೀಪ್, VSSN ಮಾಜಿ ಅಧ್ಯಕ್ಷ ಮಂಜುನಾಥ್, ಬೀಡಿಕೆರೆ ಗೌರೀಶ್, ಸಿಗೇಹಳ್ಳಿ ಕುಮಾರ್ ಅಭಿನಂದನೆ ಸಲ್ಲಿಸಿದರು.

ಈ ವೇಳೆ ನಿರ್ದೇಶಕರಾದ ಎ ರಾಮಾಂಜಿನಪ್ಪ, ಗೋಪಾಲರೆಡ್ಡಿ, ರಕ್ಷಿತ್ ಬಿ., ವೆಂಕಟೇಶ್, ಮುನಿರಾಜು, ಭಾಗ್ಯಮ್ಮ, ಜನಾರ್ಧನ್ ಎಂ., ಲ ಮುಖಂಡರಾದ ಸಂದೀಪ್ ಗಂಟಿಗಾನಹಳ್ಳಿ. ಕುಮಾರ್, ಸುರೇಶ್, ಮಂಜುನಾಥ್ ಹೆಗ್ಗಡಹಳ್ಳಿ, ಶ್ರೀನಿವಾಸ್ ಮತ್ತಿತರರಿದ್ದರು.