ದೊಡ್ಡಬಳ್ಳಾಪುರ (Doddaballapura); ಬೇಸಿಗೆ ಆರಂಭದ ದಿನಗಳಲ್ಲಿಯೇ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗುತ್ತಿದೆ. ಅಂತೆಯೇ ತಾಲೂಕಿನ ಆರೂಢಿ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೆಂಕಿ ತಗುಲಿ, ಹೊತ್ತಿ ಉರಿದಿದೆ.
ಇಂದು (ಮಾ.12) ಸಂಜೆ 8.40ರ ಸುಮಾರಿಗೆ ಜೋರಾದ ಸದ್ದಿನೊಂದಿಗೆ ಟ್ರಾನ್ಸ್ಫಾರ್ಮರ್ಗೆ ಬೆಂಕಿ ತಗುಲಿದ್ದು, ಬೆಂಕಿ ವ್ಯಾಪಕವಾಗಿ ಹೊತ್ತಿ ಉರಿದಿದೆ.
ಆರೂಢಿ ಗ್ರಾಮದ ಪ್ರಮುಖ ರಸ್ತೆ ಬದಿಯಲ್ಲಿಯೇ ಟ್ರಾನ್ಸ್ಫಾರ್ಮರ್ ಬೆಂಕಿಗೆ ಬಿದ್ದಿದ್ದು, ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತು.
ಟ್ರಾನ್ಸ್ಫಾರ್ಮರ್ ಬೆಂಕಿ ತಗುಲಿದ ಪರಿಣಾಮ ಈ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಬೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ.